ಗದಗ: ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಜಿಮ್ಸ್ ಆಸ್ಪತ್ರೆ ಔಷಧ ಉಗ್ರಾಣದಲ್ಲಿ ಮಳೆ ನೀರು ಅವಾಂತರ ಸೃಷ್ಟಿಸಿದೆ. ಜಿಮ್ಸ್ ಆಸ್ಪತ್ರೆ ನೆಲ ಮಹಡಿಯಲ್ಲಿರುವ ಮುಖ್ಯ ಡ್ರಗ್ ಸ್ಟೋರ್ ನಲ್ಲಿ ಮಳೆ ನೀರು ತುಂಬಿದ ಪರಿಣಾಮ ಕೋಟ್ಯಂತರ ಮೌಲ್ಯದ ಔಷಧಿಗಳು, ಮೆಡಿಕಲ್ ಉಪಕರಣಗಳು ಹಾಳಾಗುವ ಹಂತದಲ್ಲಿವೆ.. ಸತತ ಮಳೆ ಹಾಗೂ ಆಸ್ಪತ್ರೆ ಪಕ್ಕದ ಗುಡ್ಡದ ನೀರು ಹರಿದು ಆಸ್ಪತ್ರೆ ನೆಲ ಮಹಡಿ ಹೊಕ್ಕು ಅವಾಂತರ ಸೃಷ್ಟಿಸಿದೆ..
ಸೋಮವಾರ ರಾತ್ರಿಯಿಂದ ಜಿಲ್ಲೆಯಾದ್ಯಂತ ವರುಣ ಅಬ್ಬರಿಸ್ತಿದ್ದಾನೆ. ಅದ್ರಲ್ಲೂ ನಾಗಾವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಬಿದ್ದ ಬಗ್ಗೆ ವರದಿಯಾಗಿತ್ತು.. ಸೋಮವಾರ ರಾತ್ರಿಯಿಂದಲೇ ಡ್ರಗ್ ಗೋಡೌನ್ ನಲ್ಲಿ ನೀರು ತುಂಬಿಕೊಳ್ತಿತ್ತು. ಈವರೆಗೂ ಸುಮಾರು ಮೂರು ಫೀಟ್ ನಷ್ಟು ನೀರು ಸಂಗ್ರಹವಾಗಿದೆ.. ಗೋಡೌನ್ ರ್ಯಾಕ್ ನಲ್ಲಿರಿಸಿದ್ದ ಸಿರೇಂಜ್, ಸ್ಯಾನಿಟೈಜರ್, ಟ್ಯಾಬ್ಲೆಟ್ ತುಂಬಿದ ಡಬ್ಬ, ಸರ್ಜಿಕಲ್ ಗ್ಲೌಸ್, ಔಷಧಿ ಬಾಟಲಿಗಳು ನೀರಿನಲ್ಲಿ ತೇಲಾಡ್ತಿದೆ..
ಮೊನ್ನೆಯಿಂದಲೂ ನೀರನ್ನ ಹೊರಹಾಕೋದಕ್ಕೆ ಪ್ರಯತ್ನ ನಡೆದಿದೆ.. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪಂಪ್ ಸೆಟ್ ಮೂಲಕ ನೀರು ಖಾಲಿ ಮಾಡೋದಕ್ಕೆ ಮುಂದಾಗಿದ್ರು.. ಆದ್ರೆ, ಚಿಕ್ಕ ವಸ್ತುಗಳು ಪಂಪ್ ಸೆಟ್ ಪೈಪ್ ಗೆ ಸಿಲುಕಿ ನೀರು ಎತ್ತೋದಕ್ಕೆ ಸಾಧ್ಯವಾಗಿರಲಿಲ್ಲ. ಇದ್ರಿಂದಾಗಿ ಜಿಮ್ಸ್ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್, ಡ್ರಗ್ ಹೌಸ್ ಸಿಬ್ಬಂದಿಗಳೇ ಸೇರಿ ಔಷಧಿಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ.
PublicNext
08/09/2022 07:27 pm