ತಿರುವನಂತಪುರ: ಪುನೀತ್ ರಾಜ್ ಕುಮಾರ್ ಅವರು ಅಕಾಲಿಕ ನಿಧನಕ್ಕೆ ಅವರು ಜಿಮ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಬಾಡಿಬಿಲ್ಡ್ ಗಾಗಿ ಹೆಚ್ಚಿನ ರೀತಿಯಲ್ಲಿ ವರ್ಕ್ ಔಟ್ ಮಾಡುತ್ತಿದ್ದುದೇ ಹೃದಯಾಘಾತಕ್ಕೆ ಕಾರಣ ಎನ್ನುವ ಮಾತೂ ವೈರಲ್ ಆಗುತ್ತಿರುವ ಮಧ್ಯೆಯೇ ಕೇರಳ ಸರ್ಕಾರ ಜೀಮ್ ಗಳಿಗೆ ಕೆಲವು ರೂಲ್ಸ್ ಗಳನ್ನು ಜಾರಿಗೊಳಿಸಿದೆ.
ಜಿಮ್ ನಲ್ಲಿ ಅತಿಹೆಚ್ಚು ವರ್ಕ್ ಔಟ್ ಮಾಡಿದವರು ಹಾಗೂ ಅಲ್ಲಿ ನೀಡುವ ಪಾನೀಯಗಳನ್ನು ಕುಡಿದ ಪರಿಣಾಮವಾಗಿ ಕೆಲವು ಸಾವು ಸಂಭವಿಸಿರುವುದರ ಬಗ್ಗೆ ಇದಾಗಲೇ ತಜ್ಞರು ಹೇಳಿದ್ದಾರೆ. ಕೇರಳ ಸರ್ಕಾರ, ಜಿಮ್ ಗಳಲ್ಲಿ ಎಇಡಿ ಉಪಕರಣ ಕಡ್ಡಾಯ ಮಾಡುವಂತೆ ನಿರ್ಧಾರ ತೆಗೆದುಕೊಂಡಿದೆ. ಇದರಿಂದ ಜಿಮ್ ಗಳಲ್ಲಿ ಆಕಸ್ಮಿಕವಾಗಿ ಹೃದಯದ ತೊಂದರೆಯಾದರೆ ಅದನ್ನು ಗುರುತಿಸಲು ಈ ಉಪಕರಣ ಸಹಾಯ ಮಾಡುತ್ತದೆ.
ಜಿಮ್ ನಲ್ಲಿ ವರ್ಕ್ ಔಟ್ ಮಾಡುವ ಸಮಯದಲ್ಲಿ ಏಕಾಏಕಿ ಹೃದಯ ಬಡಿತ ನಿಂತರೆ ಅಥವಾ ಹೃದಯಕ್ಕೆ ಯಾವುದೇ ಸಮಸ್ಯೆಯಾದರೂ ಕೂಡಲೇ ಉಪಚಾರ ಮಾಡಲು ಅನುಕೂಲವಾಗುವ ಉಪಕರಣ ಇದಾಗಿದೆ. ಜಿಮ್ ಮಾತ್ರವಲ್ಲದೇ, ಕೇರಳದಾದ್ಯಂತ ಇರುವ ಎಲ್ಲ ಕ್ರೀಡಾಂಗಣಗಳು, ಒಳಾಂಗಣಗಳಲ್ಲಿ ಎಇಡಿ ಡಿವೈಸ್ ಸೇರಿದಂತೆ ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.
ಪುನೀತ್ ಅವರ ಸಾವಿನ ನಂತರ ಕೇರಳದ ರಾಯಲ್ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಮಾತನಾಡಿದ ಸಾರಿಗೆ ಸಚಿವ ಅಂಟೋನಿ ರಾಜು, ಕೇರಳದ ಕ್ರೀಡಾ ಸಚಿವ ವಿ. ಆಬ್ದುರೆಹಮಾನ್ ಅವರೊಂದಿಗೆ ಚರ್ಚಿಸಿ ಎಲ್ಲೆಡೆ ಇದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದರು.
PublicNext
31/10/2021 02:16 pm