ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಕಾಏಕಿ ಕೈಕೊಟ್ಟ ವಿದ್ಯುತ್​, ರೋಗಿಗಳ ಚಿಕಿತ್ಸೆಗೆ ಮೊಬೈಲ್​ ಟಾರ್ಚ್‌ ಬಳಕೆ;​ ವಿಡಿಯೋ ವೈರಲ್

ಬಾಲಿ : ಉತ್ತರ ಪ್ರದೇಶದ ಹಲವೆಡೆ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್​ ವ್ಯತ್ಯಯವಾದ ಹಿನ್ನೆಲೆ ಬಾಲಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮೊಬೈಲ್ ಲೈಟ್ ಮೊರೆ ಹೋದ ಘಟನೆ ನಡೆದಿದೆ.

ಶನಿವಾರ ರಾತ್ರಿ ಏಕಾಏಕಿ ವಿದ್ಯುತ್ ಕಡಿತಗೊಂಡ ಹಿನ್ನೆಲೆಯಲ್ಲಿ ರೋಗಿಗಳು, ವೈದ್ಯರು ಪರದಾಡಬೇಕಾಯಿತು. ಬೇರೆ ದಾರಿ ಇಲ್ಲದೇ ವೈದ್ಯರು ರೋಗಿಗಳನ್ನು ಮೊಬೈಲ್ ಲೈಟ್ ಮೂಲಕ ತಪಾಸಣೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಜನರೇಟರ್​ ಇದ್ದರೂ ಅದು ಪದೇ ಪದೇ ಕಳುವಾಗುತ್ತದೆ ಎನ್ನುವ ಕಾರಣಕ್ಕೆ ಬ್ಯಾಟರಿಗಳನ್ನು ತೆಗೆದು ಇಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಬ್ಯಾಟರಿ ಅಳವಡಿಸಲು ಕನಿಷ್ಠ 15-20 ನಿಮಿಷ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ರೋಗಿಯ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ವೈದ್ಯರು ಮೊಬೈಲ್​ ಟಾರ್ಚ್​ ಮೊರೆ ಹೋಗಿದ್ದಾರೆ.

ಮಹಿಳೆಯೊಬ್ಬರನ್ನು ಮಲಗಿಸಿ ವೈದ್ಯರು ತಪಾಸಣೆ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಕುರಿತು ಜಿಲ್ಲಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್ ಕೂಡ ಸ್ಪಷ್ಟನೆ ನೀಡಿದ್ದಾರೆ.

ಆದರೆ ಸದಾ ಚರ್ಚೆಯಲ್ಲಿ ಇರುವ ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿರುವ ಕಾರಣ, ಬಿಜೆಪಿ ವಿರೋಧಿಗಳು ಸಿಎಂ ಯೋಗಿ ಆದಿತ್ಯನಾಥ ಅವರ ಸರ್ಕಾರವನ್ನು ಟೀಕಿಸಲು ಅಸ್ತ್ರವಾಗಿಸಿಕೊಂಡಿದ್ದಾರೆ.

Edited By : Abhishek Kamoji
PublicNext

PublicNext

12/09/2022 05:15 pm

Cinque Terre

126.02 K

Cinque Terre

1

ಸಂಬಂಧಿತ ಸುದ್ದಿ