ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆದ್ದಾರಿ ಟೋಲ್ ವ್ಯವಸ್ಥೆ ಬದಲು : ಮುಂದಿನ 6 ತಿಂಗಳಲ್ಲಿ ಜಾರಿ

ನವದೆಹಲಿ: ಹೆದ್ದಾರಿ ಟೋಲ್ ಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ತಡೆಯಲು ಟೋಲ್ ಪ್ಲಾಜಾಗಳ ಬದಲಿಗೆ ಹೊಸ ತಂತ್ರಜ್ಞಾನವನ್ನು ತರಲು ಸರ್ಕಾರ ನಿರ್ಧರಿಸಿದೆ. ಹೌದು ಸುಗಮ ಸಂಚಾರಕ್ಕಾಗಿ ಉಪಗ್ರಹ ಆಧಾರಿತ ಅಥವಾ ನಂಬರ್ ಪ್ಲೇಟ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಮುಂದಿನ ಆರು ತಿಂಗಳಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಸರ್ಕಾರವು ಎರಡು ಆಯ್ಕೆಗಳನ್ನು ಹುಡುಕುತ್ತಿದ್ದು, ಅದರಲ್ಲಿ ಒಂದು ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆಯಾಗಿದ್ದು, ಜಿಪಿಎಸ್ ಮೂಲಕ ಟೋಲ್ ಅನ್ನು ನೇರವಾಗಿ ಪ್ರಯಾಣಿಕರ ಬ್ಯಾಂಕ್ ಖಾತೆಗಳಿಂದ ಕಳೆಯಲಾಗುತ್ತದೆ ಮತ್ತು ಇನ್ನೊಂದು ಆಯ್ಕೆಯು ವಾಹನಗಳ ನಂಬರ್ ಪ್ಲೇಟ್ ಗಳ ಮೂಲಕ.

ಟೋಲ್ ಸಂಗ್ರಹಿಸಲು ಉಪಗ್ರಹ ಆಧಾರಿತ ವ್ಯವಸ್ಥೆಯನ್ನು ಬಳಸುವಾಗ ಫಾಸ್ಟ್ ಟ್ಯಾಗ್ ಬದಲಿಗೆ ಜಿಪಿಎಸ್ ಅನ್ನು ಪರಿಚಯಿಸಲಾಗುವುದು ಎಂದು ಹೇಳಿದರು.ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಮಹತ್ವದ ಕಾನೂನನ್ನು ತರಲಿದೆ. ಟೋಲ್ ಪ್ಲಾಜಾಗಳಲ್ಲಿ ಟ್ರಾಫಿಕ್ ಜಾಮ್ ನಿಂದ ಜನರಿಗೆ ಪರಿಹಾರ ನೀಡಲು ಈ ವ್ಯವಸ್ಥೆ ಮುಖ್ಯವಾಗಿದೆ ಎಂದು ಹೇಳಿದರು.

Edited By : Nirmala Aralikatti
PublicNext

PublicNext

04/08/2022 02:01 pm

Cinque Terre

19.23 K

Cinque Terre

5

ಸಂಬಂಧಿತ ಸುದ್ದಿ