ಬೆಂಗಳೂರು- ರಾಜಧಾನಿ ಬೆಂಗಳೂರಿನ ಹೊರವಲಯದ ಬಡಾವಣೆ, ಅಪಾರ್ಟ್ ಮೆಂಟ್ ಮೇಲೆ ಬಿಎಂಟಿಸಿ ಕಣ್ಣು ಇಟ್ಟಿದೆ. ಇದೇನಪ್ಪ ಅಂದು ಕೊಂಡ್ರಾ? ಹಾಗಿದ್ರೆ ಈ ಸ್ಟೋರಿ ನೋಡಿ....!
ಅಂದಹಾಗೆ ಆದಾಯ ಕೊರತೆಯಿಂದ ಸಾಲದ ಸುಳಿಯಲ್ಲಿ ಸಿಲುಕಿರುವ ಬಿಎಂಟಿಸಿ ಹೊರಬರಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಈ ಸಂಬಂಧ ಸಿಲಿಕಾನ್ ಸಿಟಿಯ ಮೂಲೆ- ಮೂಲೆಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಹೌದು.. ನಗರದ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆ, ಅಪಾರ್ಟ್ ಮೆಂಟ್ ಗಳಿಗೆ ಬಸ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಈ ಸಂಬಂಧ 2-3 ಸಾವಿರ ಮಿನಿ ಬಸ್ ಖರೀದಿಯ ಬಗ್ಗೆ ಚಿಂತನೆ ನಡೆದಿದೆ.
ಟೆಂಪೋ ಟ್ರಾವೆಲ್ ಮಾದರಿಯಲ್ಲಿ 25 ಸೀಟು ಕೆಪಾಸಿಟಿಯಿರುವ ಬಸ್ ಸಂಚರಿಸಲಿದೆ. ಬಡಾವಣೆ, ಅಪಾರ್ಟ್ ಮೆಂಟ್ ನಿಂದ ಸನಿಹದ ಮೆಟ್ರೋ ನಿಲ್ದಾಣ ಅಥವಾ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಬಿಎಂಟಿಸಿ ಹಮ್ಮಿಕೊಂಡಿದೆ. ಕೇವಲ 10 ಕಿ.ಮೀ ಮಾರ್ಗಕ್ಕೆ ಮಾತ್ರ ಈ ಬಸ್ ವ್ಯವಸ್ಥೆ ಇರಲಿದೆ.
ಕನಕಪುರ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಹೊಸಕೋಟೆ ರಸ್ತೆ, ಯಲಹಂಕ ಸುತ್ತಮುತ್ತಲಿನ ಬಡವಾಣೆ ಅಪಾರ್ಟ್ಮೆಂಟ್ಗಳಿಗೆ, ಮಿನಿ ಬಸ್ ವ್ಯವಸ್ಥೆ ಮಾಡಲು ಬಿಎಂಟಿಸಿ ಮುಂದಾಗಿದೆ.
PublicNext
09/06/2022 01:32 pm