ನವದೆಹಲಿ: ನಿತ್ಯವೂ ರೈಲಿನಲ್ಲಿ ಓಡಾಡುವವರಿಗೆ ಈ ಸುದ್ದಿ ಅನುಕೂಲ ಆಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಹೊಸ ಪ್ಲಾನ್ ಮಾಡುತ್ತಿದೆ. ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್‌ಗಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿಗೆ ಮುಕ್ತಿ ಸಿಕ್ಕಂತಾಗಿದೆ. ಹೊಸ ಟಿಕೆಟ್ ಸೌಲಭ್ಯದ ಅಡಿಯಲ್ಲಿ, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರದಿಂದ (ATVM) ಲಭ್ಯವಿರುವ ಸೌಲಭ್ಯಗಳಿಗಾಗಿ ಡಿಜಿಟಲ್ ವಹಿವಾಟಿನ ಮೂಲಕ ಪಾವತಿಸಲು ಸಾಧ್ಯವಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ. ದೇಶಾದ್ಯಂತ ಎಲ್ಲ ರೈಲು ನಿಲ್ದಾಣಗಳಲ್ಲಿ ಈ ಸೌಲಭ್ಯ ನೀಡಲು ರೈಲ್ವೇ ಇಲಾಖೆ ಸಿದ್ಧತೆ ನಡೆಸಿದೆ.
ATVM ನಿಂದ ರೈಲು ಪ್ರಯಾಣ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು ಮತ್ತು ಮಾಸಿಕ ಪಾಸ್‌ಗಳನ್ನು ಪಡೆಯಲು ಡಿಜಿಟಲ್ ಮೋಡ್‌ನಲ್ಲಿ ಹಣ ಪಾವತಿಸಬಹುದು. ಹಲವು ರೈಲು ನಿಲ್ದಾಣಗಳಲ್ಲಿ ATVMಗಳು ಮತ್ತು UPI ಮತ್ತು QR ಕೋಡ್‌ಗಳನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗಿದೆ. ಇದರ ಮೂಲಕ ನೀವು ATVM ಸ್ಮಾರ್ಟ್ ಕಾರ್ಡ್ ಅನ್ನು ಸಹ ರೀಚಾರ್ಜ್ ಮಾಡಬಹುದು. ಈ ಸೌಲಭ್ಯವನ್ನು ರೈಲ್ವೆ ಇಲಾಖೆಯಿಂದ ಆರಂಭಿಸುವ ಸಂದರ್ಭದಲ್ಲಿ ಪ್ರಯಾಣಿಕರು ಡಿಜಿಟಲ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಬಹುದು, ಉದ್ದನೆಯ ಸಾಲಿನಲ್ಲಿ ನಿಲ್ಲುವುದಕ್ಕೆ ರೈಲ್ವೆ ಇಲಾಖೆ ಕಡಿವಾಣ ಹಾಕಲು ಮುಂದಾಗುತ್ತಿದೆ.
PublicNext
26/05/2022 06:24 pm