ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಶೀಘ್ರದಲ್ಲೇ ಡೋರ್ ಟು ಡೋರ್ ಡೆಲಿವರಿ ಸೇವೆ ನೀಡುವತ್ತ ತನ್ನ ಗಮನ ಹರಿಸಿದೆ.
ಕೋರಿಯರ್ ಕಂಪನಿಗಳು ಅಥವಾ ಇ-ಕಾಮರ್ಸ್ ಕಂಪನಿಗಳಂತೆ, ರೈಲ್ವೆಯು ಯಾವುದೇ ರಾಜ್ಯ ಅಥವಾ ನಗರದಿಂದ ಆಮದು ಮಾಡಿಕೊಳ್ಳುವ ಸರಕುಗಳನ್ನು ಜನರಿಗೆ ಅವರ ಮನೆಗಳಿಗೆ ತಲುಪಿಸಲು ಪ್ರಯೋಗಗಳನ್ನು ನಡೆಸುತ್ತಿದೆ. ಮನೆ-ಮನೆಗೆ ವಿತರಣಾ ಯೋಜನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ಪೋಸ್ಟ್, ಲಾಜಿಸ್ಟಿಕ್ಸ್ ವ್ಯವಹಾರಗಳು, ಖಾಸಗಿ ವಲಯದ ಹೊಸ ಪ್ರವೇಶಿಗರು ಸೇರಿದಂತೆ ಕೆಲವನ್ನು ಹಿಡಿತಕ್ಕೆ ಪಡೆಯಲು ರೈಲ್ವೆ ಇಲಾಖೆಯು ಮನೆ ಬಾಗಿಲಿಗೆ ಸೇವೆ ಒದಗಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಲಾಜಿಸ್ಟಿಕ್ಸ್ ವ್ಯವಹಾರದಲ್ಲಿ ತನ್ನ ಹಿಡಿತವನ್ನು ಹೆಚ್ಚಿಸಲು ನಿರ್ಧರಿಸಿರುವ ರೈಲ್ವೆ ಇಲಾಖೆ ಇಂಥದ್ದೊಂದು ಯೋಜನೆಗೆ ಮುಂದಾಗಿದೆ. ದೇಶದ ಯಾವುದೇ ಮೂಲೆಯಿಂದ ಚಿಕ್ಕಪುಟ್ಟ ವಸ್ತುಗಳಿಂದ ಹಿಡಿದು ಬೃಹದಾಕಾರದ ವಸ್ತುಗಳನ್ನು ಇನ್ಮುಂದೆ ಪಾರ್ಸೆಲ್ ಕಳುಹಿಸಿದರೆ ಅದು ಯಾರಿಗೆ ತಲುಪಬೇಕೋ ಅವರ ಮನೆಯ ಬಾಗಿಲಿಗೆ ಮುಟ್ಟಲಿದೆ.
ಈಗ ಇ-ಕಾಮರ್ಸ್ ಮತ್ತು ಕೋರಿಯರ್ ಕಂಪನಿಯಂತೆ, ರೈಲ್ವೆ ಪಾರ್ಸೆಲ್ ನೀಡಲಿದೆ. ಇದಕ್ಕಾಗಿ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿದ್ದು, ಅದರ ಕುರಿತು ಸಂಪೂರ್ಣ ವಿವರವನ್ನು ರೈಲ್ವೆ ಇಲಾಖೆ ಶೀಘ್ರದಲ್ಲಿ ನೀಡಲಿದೆ. ಬೇರೆಲ್ಲಾ ಕೋರಿಯರ್ ಸರ್ವೀಸ್‌ಗಳಂತೆ ಈ ಅಪ್ಲಿಕೇಶನ್ ಸಹಾಯದಿಂದ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
PublicNext
21/02/2022 10:36 am