ವಿಶೇಷ ವರದಿ: ಗಣೇಶ್ ಹೆಗಡೆ
ಬೆಂಗಳೂರು: ಸಾರಿಗೆ ನೌಕರರ ಗೋಳು ಹೇಳತೀರದಾಗಿದೆ. ಮೂರು ತಿಂಗಳಿಂದ ಸರಿಯಾದ ವೇತನ ದೊರೆಯುತ್ತಿಲ್ಲ. ಅರ್ಧಂಬರ್ಧ ವೇತನ ಪಡೆಯುತ್ತಲೇ ದುಡಿಯೋ ಪರಿಸ್ಥಿತಿ ನಿರ್ಮಾಣವಾಗಿದೆ!
ಆಗಸ್ಟ್ , ಸೆಪ್ಟೆಂಬರ್, ಬಾಕಿ ಅರ್ಧ ವೇತನ ಹಾಗೂ ಅಕ್ಟೋಬರ್ ಪೂರ್ತಿ ಸಂಬಳ ಇನ್ನೂ ಸಿಕ್ಕಿಲ್ಲ.
ರಾಜ್ಯದ 1 ಲಕ್ಷ, 30 ಸಾವಿರ ನೌಕರರು ನಾಲ್ಕು ನಿಗಮಗಳಿಂದ ಕೆಲಸ ಮಾಡ್ತಾರೆ.
ಆದರೆ, ಸಂಬಳ ಸರಿಯಾಗಿ ನೀಡದೆ ಸಾರಿಗೆ ನೌಕರರು ಬದುಕೋದು ಹೇಗೆ ಎಂಬ ಪ್ರಶ್ನೆ ಉದ್ಭವ ಆಗಿದೆ.
ನಿತ್ಯ ಕೆಎಸ್ ಆರ್ ಟಿಸಿಗೆ 6.5 ಕೋಟಿ ರೂ. ಕಾರ್ಯಾಚರಣೆ ಆದಾಯ ಬರಲಿದೆ. ಬಿಎಂಟಿಸಿಗೆ 3.5 ಕೋಟಿ ಬರಲಿದೆ. ಆದರೂ ನೌಕರರಿಗೆ ನೀಡಲು ಸಂಬಳ ಇಲ್ಲ!
PublicNext
27/11/2021 12:14 pm