ವಿಶೇಷ ವರದಿ: ಗಣೇಶ್ ಹೆಗಡೆ
ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಿವಾದ ಮೈ ಮೇಲೆ ಎಳೆದುಕೊಳ್ಳುವಂತಹ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ.
ಈಗಿರುವ ತನ್ನ ಕೇಂದ್ರ ಕಚೇರಿ ಕಟ್ಟಡ ನೆಲಸಮ ಮಾಡಲು ಪ್ರಾಧಿಕಾರ ಅಣಿಯಾಗುತ್ತಿದೆ.
ಮೂರು ಮಹಡಿಗಳ ಕಟ್ಟಡ ಸಂಕೀರ್ಣ ವನ್ನ 2004 ರಲ್ಲಿ ನಿರ್ಮಾಣ ಮಾಡಲಾಗಿದೆ.ಆಗಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಕಟ್ಟಡವನ್ನು ಉದ್ಘಾಟನೆ ಮಾಡಿದ್ದರು.
ಕೇಂದ್ರ ಕಚೇರಿ ಆವರಣದಲ್ಲಿ 2 ಎಕರೆ 29 ಗುಂಟೆ ಜಾಗ ಇದೆ.ಇಷ್ಟು ಜಾಗ ಬಳಿಸಿಕೊಂಡು 250 ಕೋಟಿ ವೆಚ್ಚದಲ್ಲಿ ಬಹುಮಹಡಿ ಕಟ್ಟಡ ಸಂಕೀರ್ಣವನ್ನ ನಿರ್ಮಿಸುವ ಯೋಜನೆ ಬಿಡಿಎ ರೂಪಿಸಿದೆ.
ದಾಖಲೆ ಪತ್ರಗಳನ್ನ ದಾಸ್ತಾನು ಇಡಲು ಕೊಠಡಿಗಳ ಸಂಖ್ಯೆ ಕಡಿಮೆ ಇದೆ.ಹೀಗಾಗಿ ಹೊಸ ಕಟ್ಟಡ ನಿರ್ಮಿಸುವ ಯೋಜನೆಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇತ್ತ ಕೋವಿಡ್ ಸಂದರ್ಭದಲ್ಲಿ ಸರ್ಕಾರ ತೀವ್ರ ಅರ್ಥಿಕ ಸಂಕಷ್ಟ ಎದುರಿಸಿದೆ.ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇಂತಹ ಸಂಕಷ್ಟದಲ್ಲಿಯೂ ಕೇಂದ್ರ ಕಚೇರಿ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಲು ಮುಂದಾಗಿದೆ.ಅದು ಸುಸ್ಥಿರ ಕಟ್ಟಡ ಕೆಡವೊದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಎದ್ದಿದೆ.
PublicNext
19/11/2021 03:56 pm