ನವದೆಹಲಿ: ಜಾಗತಿಕವಾಗಿ ಕಚ್ಚಾತೈಲ ಬೆಲೆ ಸರಾಸರಿ 85 ಡಾಲರ್ ದಾಟಿ ಮುನ್ನುಗ್ಗುತ್ತಿದ್ದು, ಭಾರತದಲ್ಲಿ ಸತತ ಏಳು ದಿನಗಳಿಂದ ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ. ಇಂದು ಪೆಟ್ರೋಲ್ ದರ ಪ್ರತಿ ಲೀಟರ್ ಮೇಲೆ 35 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಮೇಲೆ 36 ಪೈಸೆ ಹೆಚ್ಚಳವಾಗಿದೆ.
ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 56 ಬಾರಿ ಹಾಗೂ ಡೀಸೆಲ್ 51 ಬಾರಿ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ ಪ್ರತಿ ಲೀಟರ್‌ಗೆ 11.15 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 10.80 ರೂ. ಏರಿಕೆ ಕಂಡಿದೆ. ಪರಿಣಾಮ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಕ್, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ಪ್ಲಸ್ ದಾಟಿದೆ. ಈ ಪೈಕಿ ಅನೇಕ ರಾಜ್ಯಗಳಲ್ಲಿ ವ್ಯಾಟ್, ಸೆಸ್ ದರ ಅಧಿಕವಾಗಿವೆ.
ಯಾವ ನಗರದಲ್ಲಿ ಎಷ್ಟು ದರ?:
ಬೆಂಗಳೂರು: ಪೆಟ್ರೋಲ್ 113.56ರೂ- ಡೀಸೆಲ್ 104.50 ರೂ
ನವದೆಹಲಿ: ಪೆಟ್ರೋಲ್ 109.69ರೂ- ಡೀಸೆಲ್ 98.42 ರೂ.
ಕೋಲ್ಕತಾ: ಪೆಟ್ರೋಲ್ 110.15 ರೂ- ಡೀಸೆಲ್ 101.56ರೂ
ಮುಂಬೈ: ಪೆಟ್ರೋಲ್ 115.50 ರೂ- ಡೀಸೆಲ್ 106.62 ರೂ
ಚೆನ್ನೈ: ಪೆಟ್ರೋಲ್ 106.35 ರೂ- ಡೀಸೆಲ್ 102.59 ರೂ
ತಿರುವನಂತಪುರಂ: ಪೆಟ್ರೋಲ್ 111.75ರೂ- ಡೀಸೆಲ್ 105.55ರೂ
ಪಾಟ್ನಾ: ಪೆಟ್ರೋಲ್ 113.45 ರೂ- ಡೀಸೆಲ್ 105.07ರೂ
ಹೈದರಾಬಾದ್: ಪೆಟ್ರೋಲ್ 114.12ರೂ- ಡೀಸೆಲ್ 107.40 ರೂ
ನೋಯ್ಡಾ: ಪೆಟ್ರೋಲ್ 106.81 ರೂ- ಡೀಸೆಲ್ 99.09ರೂ
PublicNext
02/11/2021 12:18 pm