ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಟೆಲಿಕಾಂ ಸಂಸ್ಥೆ ಇತ್ತೀಚೆಗಷ್ಟೆ ಕೇವಲ 47 ರೂಪಾಯಿಗಳ ಹೊಸ ಫಸ್ಟ್ ರೀಚಾರ್ಜ್ ಅನ್ನು ಪರಿಚಯಿಸಿ ಭಾರೀ ಸುದ್ದಿ ಮಾಡಿತ್ತು. ಖಾಸಗಿ ಟೆಲಿಕಾಂಗಳಿಗೆ ಸ್ಪರ್ಧೆ ಒಡ್ಡುವಂತಹ ಆಕರ್ಷಕ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿತ್ತು.
ಸದ್ಯ ಅಧಿಕ ಡೇಟಾ, ಬಿಗ್ ವ್ಯಾಲಿಡಿಟಿ ಹಾಗೂ ಕರೆಯ ಸೌಲಭ್ಯದ ಪ್ಲ್ಯಾನ್‌ಗಳ ಜೊತೆಗೆ ಹೆಚ್ಚುವರಿ ಪ್ರಯೋಜನ ನೀಡಿ ಗ್ರಾಹಕರನ್ನು ಸೆಳೆಯುತ್ತವೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್ ಸದ್ಯ ಮತ್ತೊಂದು ಆಕರ್ಷಕ ಆಫರ್ವೊಂದನ್ನು ನೀಡುತ್ತಿದೆ. ಮಾರ್ಚ್ 1 ರಿಂದ ಗ್ರಾಹಕರಿಗೆ ಈ ಹೊಸ ಆಫರ್ ಲಭ್ಯವಿದ್ದು, ಮೂರು ಹೊಸ ಡಿಎಸ್ಎಲ್ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ಬಿಎಸ್ಎನ್ಎಲ್ ಪರಿಚಯಿಸಿದೆ. ಈ ಯೋಜನೆಗಳಲ್ಲಿ 299 ರೂ., 399 ರೂ, ಮತ್ತು ರೂ. 555 ರೂ. ಎಂಬ ಮೂರು ಪ್ಲ್ಯಾನ್ಗಳನ್ನು ನೀಡಲಿದೆ.
PublicNext
27/02/2021 08:30 am