ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಕೊರಟಗೆರೆ ತಾಲೂಕಿನ ಗೊರವನಹಳ್ಳಿ, ತೀತಾ ಮಧ್ಯದ ರಸ್ತೆಯಲ್ಲಿನ ಸೇತುವೆ ಕುಸಿದುಬಿದ್ದು, ಸಂಪೂರ್ಣ ರಸ್ತೆ ಸಂಚಾರ ಕಡಿತಗೊಂಡಿದೆ. ಸೇತುವೆ ನಿರ್ಮಾಣ ಮಾಡಿ 8 ವರ್ಷಗಳಾಗಿದ್ದು, ಕಾಮಗಾರಿಯನ್ನು ಕಳಪೆಯಾಗಿ ನಿರ್ವಹಿಸಿರುವುದುರಿಂದ ರಸ್ತೆಯ ಸೇತುವೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ,
ಯಾವುದಾದರೂ ವಾಹನ ಸಂಚರಿಸುವ ಸಂದರ್ಭದಲ್ಲಿ ಈ ಕುಸಿತ ಆಗಿದ್ದರೆ ಹೆಚ್ಚಿನ ಅನಾಹುತ ಸಂಭವಿಸುತ್ತಿದ್ದು ಎಂದು ಸ್ಥಳೀಯರು ಹೇಳಿದ್ದಾರೆ.ಇನ್ನು ಯಾವುದೇ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಸ್ತೆಯ ಸಂಚಾರ ಸಂಪೂರ್ಣ ಕಡಿತವಾಗಿದೆ ಬಹುತೇಕ ಶಾಲಾ ಕಾಲೇಜು ಮಕ್ಕಳು, ನಿತ್ಯ ಕೆಲಸಕ್ಕೆ ಹೋಗುವವರು ಇಂದು ಸಂಚಾರಕ್ಕೆ ಅನ್ಯಮಾರ್ಗವಿಲ್ಲದೆ ಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣ ವಾಗಿದೆ.
ವರದಿ:ರಾಘವೇಂದ್ರ ದಾಸರಹಳ್ಳಿ,ಪಬ್ಲಿಕ್ ನೆಕ್ಸ್ಟ್
PublicNext
26/08/2022 12:54 pm