ಕೊಲಂಬೋ: ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಭಾರತ ದೇಶವನ್ನು ಕೊಂಡಾಡಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಗೆ ಸಹಾಯ ಮಾಡುತ್ತಿರುವ ಭಾರತದ ನಡೆ ಕಂಡ ಅವರು, ಭಾರತವನ್ನು 'ಬಿಗ್ ಬ್ರದರ್' ಎಂದಿದ್ದಾರೆ. ಹಾಗೂ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯಸೂರ್ಯ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ದೇಶದಲ್ಲಿ (ಶ್ರೀಲಂಕಾ) ಜನರ ಬದುಕು ದುಸ್ತರವಾಗಿದೆ. ಶ್ರೀಲಂಕಾದ ಪ್ರಜೆಗಳು ಈ ಬಿಕ್ಕಟ್ಟಿನಿಂದ ಆದಷ್ಟು ಬೇಗ ಹೊರಬರಲು ಹವಣಿಸುತ್ತಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ ಭಾರತವು ನಮಗೆ ಸಹಾಯ ಮಾಡಿದೆ. ಒಂದು ನೆರೆಯ ದೇಶವಾಗಿ, ಹಾಗು ನಮ್ಮ ದೇಶದ ಹಿರಿಯ ಸಹೋದರನಾಗಿ ನಮ್ಮ ನೆರವಿಗೆ ಬಂದಿದೆ. ಇದಕ್ಕಾಗಿ ನಾವು ಭಾರತ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞರಾಗಿರುತ್ತೇವೆ ಎಂದು ಸನತ್ ಜಯಸೂರ್ಯ ಹೇಳಿದ್ದಾರೆ.
ಪ್ರಸ್ತುತ ಶ್ರೀಲಂಕಾ ತೀವ್ರ ಗತಿಯಲ್ಲಿ ಆಹಾರ ಹಾಗೂ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟನ್ನು ತಗ್ಗಿಸಲು ಭಾರತ ಇದುವರೆಗೆ ಶ್ರೀಲಂಕಾಗೆ 2,70,000 ಮೆಟ್ರಿಕ್ ಟನ್(ಎಂಟಿ) ಇಂಧನವನ್ನು ಪೂರೈಸಿದೆ. ಕಳೆದ 24 ಗಂಟೆಗಳಲ್ಲಿ ಭಾರತ 36,000 ಎಂಟಿ ಪೆಟ್ರೋಲ್ ಹಾಗೂ 40,000 ಎಂಟಿ ಡೀಸೆಲ್ ರವಾನಿಸಿದೆ. ಇದರೊಂದಿಗೆ ಔಷಧ, ಧಾನ್ಯ, ಅಕ್ಕಿಯನ್ನೂ ಕಳುಹಿಸಿದೆ.
PublicNext
07/04/2022 03:56 pm