ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದ ಕೋವಿಡ್ ವಾರ್ ರೂಮ್‌ಗೆ ರಾಷ್ಟ್ರ ಪ್ರಶಸ್ತಿ: ಇ-ಆಡಳಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವ

ಹೈದರಾಬಾದ್: ರಾಜ್ಯದ ಕೋವಿಡ್-19 ವಾರ್ ರೂಮ್ನ ಕೋವಿಡ್ ನಿರ್ವಹಣೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು(ಐಸಿಟಿ) ಬಳಸುವ ವಿಭಾಗಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಕರ್ನಾಟಕಕ್ಕೆಈ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹೈದರಾಬಾದ್‌ನಲ್ಲಿ ಇ-ಆಡಳಿತದ 24ನೇ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ವೇಳೆ ಕರ್ನಾಟಕ ಈ ಪ್ರಶಸ್ತಿಯನ್ನು ರಾಜ್ಯ ಸರಕಾರದ ಪರವಾಗಿ ಕೋವಿಡ್ ವಾರ್ ರೂಮ್ ಮುಖ್ಯಸ್ಥ ಮುನಿಶ್ ಮೌದ್ಗಿಲ್ ಸ್ವೀಕರಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮುನಿಶ್ ಮೌದ್ಗಿಲ್ ಕೋವಿಡ್ ವಾರಿಯರ್ಸ್‌ಗಳಿಗೆ ನಾವು ಸಪೋರ್ಟ್ ನೆಟ್‌ವರ್ಕ್ ಆಗಿದ್ದೇವೆ. ಸರಿಯಾದ ಸಮಯಕ್ಕೆ ಸೂಕ್ತ ಮಾಹಿತಿಯನ್ನು ನೀಡಿ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೋವಿಡ್ ನಿರ್ವಹಣೆಗೆ ಬೆಂಬಲ ವ್ಯವಸ್ಥಿತವಾಗಿದೆ. ನಾವು ಗಡಿಯಾರದಲ್ಲಿ ಇರುವ ಮುಳ್ಳುಗಳಂತೆ ಕೆಲಸ ಮಾಡುತ್ತಿದ್ದೇವೆ. ಸಾಂಕ್ರಾಮಿಕ ರೋಗದ ಬಳಿಕ ಹೆಚ್ಚಿನ ಸಿಬ್ಬಂದಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ವಿವರಿಸಿದರು.

Edited By : Nagaraj Tulugeri
PublicNext

PublicNext

09/01/2022 08:13 am

Cinque Terre

88.59 K

Cinque Terre

3

ಸಂಬಂಧಿತ ಸುದ್ದಿ