ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹಣ ಬೇಡ ಭೂಮಿ‌ ಬೇಕು; ಬೈಪಾಸ್ ರಸ್ತೆ ಕಾಮಗಾರಿ ವಿರೋಧಿಸಿ ರೈತರಿಂದ ಪ್ರತಿಭಟನೆ

ಬೆಳಗಾವಿ: ತಾಲ್ಲೂಕಿನ ಮಚ್ಛೆಯಿಂದ ಹಲಗಾ ಗ್ರಾಮದ ವರೆಗೂ 9.5 ಕಿಲೋಮೀಟರ್ ಬೈಪಾಸ್ ರಸ್ತೆ ಕಾಮಗಾರಿಗೆ ಮೂರನೇ ದಿನವೂ ರೈತರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ.ಆದರೂ ವಿರೋಧದ ಮಧ್ಯೆಯು ಕಾಮಗಾರಿಯನ್ನು ಮುಂದುವರಿಸಲಾಗಿದೆ.

ರೈತ ಮುಖಂಡ ರಾಜು ಮರವೆ ನೇತೃತ್ವದಲ್ಲಿ ಹತ್ತಕ್ಕೂ ಅಧಿಕ ರೈತರು ಭತ್ತ ಬೆಳೆ ಬೆಳೆದ ಹೊಲದಲ್ಲಿ ಕುಳಿತು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ೬ ತಿಂಗಳಹಸುಗೂಸುವಿನೊಂದಿಗೆ ಆಗಮಿಸಿದ ಮಹಿಳೆಯು ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ.

ಮೂರನೇ ದಿನಕ್ಕೆ 5 ಕಿಲೋಮೀಟರ್ ದೂರದವರೆಗೂ ಕಾಮಗಾರಿ ತಲುಪಿದ್ದು,825 ರೈತರಿಗೆ 27 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಇನ್ನೂ 155 ರೈತರಿಗೆ ಪರಿಹಾರ ನೀಡಬೇಕಿದೆ.ಪರಿಹಾರ ಬೇಡಾ ನಮಗೆ ಭೂಮಿ ಬೇಕು ಎಂದು ರೈತರು ಪಟ್ಟುಹಿಡಿದಿದ್ದಾರೆ.

ಕಾಮಗಾರಿ ಪ್ರತಿ ಹಂತದಲ್ಲೂ ರೈತರು ವಿರೋಧಿಸುತ್ತಿದ್ದು, ಪೊಲೀಸ್ ಸರ್ಪಗಾವಲಿನಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಮುಂದುವರಿಯುತ್ತಿದೆ.

Edited By : Manjunath H D
PublicNext

PublicNext

13/11/2021 01:26 pm

Cinque Terre

56.47 K

Cinque Terre

1

ಸಂಬಂಧಿತ ಸುದ್ದಿ