ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಳ್ಳ ಬಂತೆಂದ್ರೆ ಚಾಕಲಬ್ಬಿ ಜನ ವಿದ್ಯಾರ್ಥಿಗಳ ಪರಿಸ್ಥಿತಿ ಹರೋಹರ.!

ಕುಂದಗೋಳ: ಆ ಊರಿಗೆ ನಗರ ಸಂಪರ್ಕ ಮಾಡಲು ಇರುವುದು ಒಂದೇ ಮಾರ್ಗ. ಆದರೆ ಆ ಮಾರ್ಗದ ಹಳ್ಳಕ್ಕೆ ಸೂಕ್ತ ಬ್ರಿಡ್ಜ್ ಇರದ ಕಾರಣ ಮಳೆ ಬಂದರೆ ಸಾಕು ಸಾರಿಗೆ ಸಂಚಾರ ಸ್ಥಗಿತವಾಗಿ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಹೌದು! ಇದು ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮದ ಜನರು ಹಲವಾರು ದಿನಗಳ ಸಮಸ್ಯೆ, ಚಾಕಲಬ್ಬಿ ಗ್ರಾಮದಿಂದ ಸಂಶಿ ಮಾರ್ಗವಾಗಿ ಕುಂದಗೋಳ ಹುಬ್ಬಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ನಡುವೆ ಹಳ್ಳಕ್ಕೆ ಹಲವಾರು ವರ್ಷಗಳ ಹಿಂದೆ ಬ್ರಿಡ್ಜ್ ನಿರ್ಮಿಸಲಾಗಿದೆ. ವಿಪರ್ಯಾಸವೆಂದರೆ ರಸ್ತೆಗಿಂತ ಬ್ರಿಡ್ಜ್ ಎತ್ತರ ಕಡಿಮೆ ಇದ್ದು ಮಳೆ ಬಂದಾಗ ನೀರಿನ ಪ್ರವಾಹಕ್ಕೆ ಹಳ್ಳ ಏರ್ಪಟ್ಟು, ಜನರು ಮುಖ್ಯವಾಗಿ ವಿದ್ಯಾರ್ಥಿಗಳು ಊರು ತಲುಪುವುದು ಇತ್ತ ನಗರ ತಲುಪುವುದು ಸವಾಲಾಗಿದೆ.

ಇನ್ನೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಳೆಗಾಲದಲ್ಲಿ ಈ ಹಳ್ಳದ ತಾಪತ್ರಯ ಕಾರಣ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆದ್ರೇ, ಜನರಿಗೆ ಮಾರ್ಕೇಟ್ ಇತರೆ ಅವಶ್ಯಕ ಕೆಲಸ ಆಸ್ಪತ್ರೆಗೆ ಹೋಗುವುದು ದುಸ್ತರವಾಗಿದೆ.

ಈ ಬಗ್ಗೆ ಹಲವಾರು ಬಾರಿ ಮುಖ್ಯಮಂತ್ರಿ ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಇಂದಿಗೂ ಹಳ್ಳಕ್ಕೆ ಬ್ರಿಡ್ಜ್ ಭಾಗ್ಯ ಕೂಡಿ ಬಂದಿಲ್ಲ. ಸದ್ಯ ಚಾಕಲಬ್ಬಿ ಗ್ರಾಮಸ್ಥರು ಪಬ್ಲಿಕ್ ನೆಕ್ಸ್ಟ್‌ಗೆ ವಿಡಿಯೋ ಕಳುಹಿಸಿ ಸಮಸ್ಯೆ ಇತ್ಯರ್ಥಕ್ಕೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

Edited By :
PublicNext

PublicNext

29/08/2022 07:42 pm

Cinque Terre

198.51 K

Cinque Terre

1

ಸಂಬಂಧಿತ ಸುದ್ದಿ