ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ವಿದ್ಯಾರ್ಥಿಗಳ ಗೋಳು ಕೇಳುವವರಾರು?

ಗದಗ: ಶೌಚಾಲಯ ಕೊರತೆ, ಸೋರುತ್ತಿರುವ ಕೊಠಡಿಗಳು, ನೀರಿಗೆ ಹಾಹಾಕಾರ, ನೆಲದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ, ಮಳೆಯಾದರೆ ಇಡೀ ಶಾಲೆಗೆ ಪ್ರವಹಿಸುವ ವಿದ್ಯುತ್, ಕೈಯಲ್ಲಿ ಜೀವ ಹಿಡಿದು ಶೈಕ್ಷಣಿಕ ಜೀವನ ದೂಡುವ ಪರಿಸ್ಥಿತಿ.

ಹೌದು... ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ವಡವಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬಂದೊದಗಿದ ಸ್ಥಿತಿ ಇದು. ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಬೆಳ್ಳಟ್ಟಿಯಲ್ಲಿ ಗ್ರಾಮದ ಖಾಸಗಿ ಕಟ್ಟಡವೊಂದರಲ್ಲಿ ನಡೆಯುತ್ತಿದೆ. ಸರ್ಕಾರ ವಸತಿ ಶಿಕ್ಷಣಕ್ಕೆ ನೀಡುತ್ತಿರುವ ಕನಿಷ್ಠ ಮೂಲಸೌಲಭ್ಯಗಳಿಂದ ಇಲ್ಲಿನ ವಿದ್ಯಾರ್ಥಿಗಳು ನಲುಗುತ್ತಿದ್ದಾರೆ.

ಸರಕಾರ ವಸತಿ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಆದರೆ ಶಾಲೆ ಪ್ರಾರಂಭವಾದಗಿನಿಂದಲೂ ನೆಲದ ಮೇಲೆ ಕುಳಿತುಕೊಂಡೇ ಪಾಠ ಕೇಳುವ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಬಂದಿದೆ. 6ರಿಂದ 10ನೇ ತರಗತಿಯವರೆಗಿನ ಈ ಶಾಲೆಯಲ್ಲಿ 125 ಗಂಡು ಮಕ್ಕಳು 85 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 219 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ವಸತಿ ನಿಲಯದ ಮಕ್ಕಳಿಗೆ ಸರ್ಕಾರ ನೀಡಿರುವ ಮೆನು ಪ್ರಕಾರ ಆಹಾರ ಒದಗಿಸುತ್ತಿಲ್ಲ. ಹುಳುಕು ಬದನೆಕಾಯಿ, ಟೊಮ್ಯಾಟೊ, ದೊಣ್ಣೆ ಮೆಣಸಿನಕಾಯಿ, ತರಕಾರಿಗಳನ್ನೇ ಅಡುಗೆಗೆ ಬಳಸುತ್ತಾರೆ. ನಮ್ಮ ಬಡ ಕುಟುಂಬಕ್ಕಿಂತಲೂ ಕೆಳಮಟ್ಟದಲ್ಲಿರುವ ಈ ವಸತಿ ಶಾಲೆಯ ಮಕ್ಕಳ ಬಗ್ಗೆ ಯಾವೊಬ್ಬ ಅಧಿಕಾರಿಗಳೂ ಕಾಳಜಿ ವಹಿಸುತ್ತಿಲ್ಲ ಎಂಬುದು ಪೋಷಕರ ಆರೋಪವಾಗಿದೆ.

ಸುರೇಶ ಲಮಾಣಿ, ಪಬ್ಲಿಕ್ ನೆಕ್ಸ್ಟ ಗದಗ

Edited By :
PublicNext

PublicNext

27/08/2022 01:06 pm

Cinque Terre

56.05 K

Cinque Terre

1