ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳಿಗೆ ಶಾಲೆ ಆರಂಭವಾದ್ರೂ ಸಮವಸ್ತ್ರ ನೀಡದ ಸರ್ಕಾರ

ವರದಿ- ಗಣೇಶ್ ಹೆಗಡೆ

ಬೆಂಗಳೂರು: ಶಾಲಾ‌ ಕಾಲೇಜು ಗಳಲ್ಲಿ ಸಮವಸ್ತ್ರ ಕಡ್ಡಾಯ ಗೊಳಿಸುವಲ್ಲಿ ಇರುವ ಆಸಕ್ತಿ, ಮಕ್ಕಳಿಗೆ ಸಮವಸ್ತ್ರ ವಿತರಿಸಲು ಆಸಕ್ತಿ ಇಲ್ಲ ದಂತಾಗಿದೆ.

ಇನ್ನು ಶಾಲೆ ಆರಂಭಕ್ಕೆ ಎರಡು ದಿನ ಬಾಕಿಯಿದೆ. ಆದರೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮೂರು ಲಕ್ಷ ಮಕ್ಕಳಿಗೆ ಇನ್ನೂ ಎರಡನೇ ಜತೆ ಸಮವಸ್ತ್ರ ವಿತರಿಸಿಲ್ಲ. ಸಮವಸ್ತ್ರ ಖರೀದಿ ಹಾಗೂ ಪೂರೈಕೆ ಸಂಬಂಧ ಸರ್ಕಾರ ಟೆಂಡರ್ ಪ್ರಕ್ರಿಯೆ ಯಲ್ಲಿಯೇ ಕಾಲ ಹರಣ ಮಾಡುತ್ತಿದೆ.

ಇಂಧನ, ಕಚ್ಚಾ ಸಾಮಗ್ರಿ ಪೂರಕ ವಸ್ತು ಮತ್ತು ಸೇವೆಗಳ ಬೆಲೆಯಲ್ಲಿ ಆಗಿರುವ ಹೆಚ್ಚಳವು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರ ಪೂರೈಕೆ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿದೆ.

ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ‌ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ‌ಇಲಾಖೆ ಆಯುಕ್ತರ ನಡುವಿನ ಪತ್ರ ವ್ಯವಹಾರ ಪಬ್ಲಿಕ್ ನೆಕ್ಸ್ಟ್ ಗೆ ದೊರೆತಿದೆ.

2021-22 ನೇ ಸಾಲಿನ ಮೊದಲೇ ಜತೆ ಸಮವಸ್ತ್ರದ ಟೆಂಡರ್ ದರ ಗಳು ಅಂದಿನ (ಕೊರೊನಾ ಸಮಯ) ಸನ್ನಿವೇಶಗಳಿಗೆ ಸೀಮಿತ ವಾಗಿ ಕಡಿಮೆ ಆಗಿದೆ. ಆದರೀಗ ಎರಡನೇ ಬಾರಿ ಕರೆದ ಅಲ್ಪಾವಧಿಯ ಟೆಂಡರ್ ನಲ್ಲಿ ಹೊರ ಹೊಮ್ಮಿದ ಅಂತಿಮ ದರದ ಟೆಂಡರ್ ದರಗಳು ಮತ್ತು ಇನ್ನಿತರ ವೆಚ್ಚಗಳು ಸೇರಿ 99.15 ಕೋಟಿ ರೂ ಆಗಿದೆ. ಈ ಮೊತ್ತವು ಮಂಜೂರಾದ ಅನುದಾನಕ್ಕಿಂತ 7.30 ಕೋಟಿ ರೂ ಹೆಚ್ಚುವರಿ ಯಾಗಿದೆ.

ಮೇ 16 ರಿಂದ ಶಾಲೆಗಳು ಪ್ರಾರಂಭ ವಾಗಲಿದೆ.ಮಕ್ಕಳಿಗೆ ಸಮವಸ್ತ್ರ ಅನಿವಾರ್ಯವಾಗಿದ್ದು, ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಬಹುದು ಎಂದು ಶಿಕ್ಷಣ ಇಲಾಖೆ ಹೇಳಿದೆ. ಈ ಬಗ್ಗೆ ದೂರವಾಣಿಯಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್ ವಿಶಾಲ್, ಟೆಂಡರ್ ಪ್ರಕ್ರಿಯೆಯಲ್ಲಿದೆ. ಆ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Edited By : Manjunath H D
PublicNext

PublicNext

13/05/2022 08:08 pm

Cinque Terre

76.21 K

Cinque Terre

1

ಸಂಬಂಧಿತ ಸುದ್ದಿ