ನವದೆಹಲಿ: ಬ್ರಿಟನ್‌ನಲ್ಲಿ ಕೊರೊನಾ ವೈರಸ್‌ನ ರೂಪಾಂತರ ಹಾಗೂ ಕೋವಿಡ್ ಉಲ್ಬಣ ಹಿನ್ನೆಲೆಯಲ್ಲಿ ಯುಕೆಯಿಂದ ಭಾರತ ನಡುವಿನ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸುವುದಾಗಿ ಭಾರತವು ಸೋಮವಾರ ಪ್ರಕಟಿಸಿದೆ.
ಬ್ರಿಟನ್‌ನಲ್ಲಿ ಸದ್ಯ ಇರುವ ಪರಿಸ್ಥಿತಿಯನ್ನು ಪರಿಗಣಿಸಿ, ಯುಕೆಯಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಡಿಸೆಂಬರ್ 31ರ ರಾತ್ರಿ 11:59 ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೆಂದು ಭಾರತೀಯ ಸರ್ಕಾರ ನಿರ್ಧರಿಸಿದೆ. ಡಿಸೆಂಬರ್ 22ರ ರಾತ್ರಿ 11:59ರಿಂದ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಟ್ವೀಟ್ ಮಾಡಿದೆ.
ಇದಲ್ಲದೆ, ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲಾ ಸಾರಿಗೆ ವಿಮಾನಗಳಲ್ಲಿ (ಹೊರಟ ವಿಮಾನಗಳು ಅಥವಾ ಡಿ.22ರ ಮೊದಲು 11:59 ಗಂಟೆಗೆ ಭಾರತವನ್ನು ತಲುಪುವ ವಿಮಾನಗಳು) ಯುಕೆಯಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಎಂದು ಸಚಿವಾಲಯ ತಿಳಿಸಿದೆ.
PublicNext
21/12/2020 04:32 pm