ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋವಾ ಅಲ್ಲಾ..ಈ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಪ್ರಿಯ ಮಹಿಳೆಯರಿದ್ದಾರೆ

ಮದ್ಯ ಅಂದ್ರೆ ಎಲ್ಲರ ತಲೆಯಲ್ಲಿ ಬರೋದು ಗೋವಾ ಆದ್ರೆ ಈ ವರದಿ ಹೇಳಹೊರಟ್ಟಿದ್ದು ಯಾವ ರಾಜ್ಯದಲ್ಲಿ ಅತೀ ಹೆಚ್ಚು ಮದ್ಯ ಸೇವಿಸುವ ಮಹಿಳೆಯರಿದ್ದಾರೆ ಎಂದು.

ಪಶ್ಚಿಮ ರಾಜ್ಯಗಳಾದ ಗೋವಾ ಮತ್ತು ಮಹಾರಾಷ್ಟ್ರದಲ್ಲಿನ ಜನರು ಹೆಚ್ಚು ಮದ್ಯ ಕುಡಿಯುತ್ತಾರೆ ಎಂಬುದು ಸಾಮಾನ್ಯ

ಆದರೆ ಈಗ ಬಿಡುಗಡೆಗೊಂಡಿರುವ ನೂತನ ಸಮೀಕ್ಷೆ ಅದಕ್ಕೆ ತದ್ವಿರುದ್ದವಾದ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆ 2019-20 ರ ಪ್ರಕಾರ, ಮಹಾರಾಷ್ಟ್ರ ಮತ್ತು ಗೋವಾಕ್ಕಿಂತ ಮದ್ಯ ನಿಷೇಧವಾಗಿರುವ ಬಿಹಾರದಲ್ಲಿ ಹೆಚ್ಚು ಮದ್ಯ ಸೇವಿಸುವುದಾಗಿ ತಿಳಿಸಿದೆ.

2015-16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ 15ರಿಂದ 49 ವರ್ಷದ ಜನರನ್ನು ಗುರಿಯಾಗಿರಿಸಿ ಮಾಹಿತಿ ಕಲೆ ಹಾಕಲಾಗಿತ್ತು.

ಆದರೆ 2019-20ರಲ್ಲಿ 15 ವರ್ಷ ಮೇಲ್ಪಟ್ಟವರನ್ನು ಸಂಪರ್ಕಿಸಿ ಸಮೀಕ್ಷೆ ಸಿದ್ಧಪಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸಿಕ್ಕಿಂನಲ್ಲಿ ಅತೀ ಹೆಚ್ಚು ಮಹಿಳೆಯರು (ಶೇ.16.2ರಷ್ಟು) ಹಾಗೂ ಅಸ್ಸಾಂನಲ್ಲಿ ಶೇ.7.3ರಷ್ಟು ಮದ್ಯ ಸೇವಿಸುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯ ಪ್ರಕಾರ ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುತ್ತಿದ್ದು, ಸಂಪೂರ್ಣ ಮದ್ಯ ನಿಷೇಧಗೊಂಡಿರುವ ಬಿಹಾರದ ಗಂಡಸರು ಅತೀ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ದಾಸರಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲುಗೊಳಿಸಿದೆ.

ಗುಜರಾತ್ ಮತ್ತು ಜಮ್ಮು-ಕಾಶ್ಮೀರದಲ್ಲಿ ಪುರುಷರು ಅತೀ ಕಡಿಮೆ ಪ್ರಮಾಣದ ಮದ್ಯ ಸೇವಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

16/12/2020 06:33 pm

Cinque Terre

47.01 K

Cinque Terre

3