ಶ್ರೀನಗರ : ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಾವಳಿ ಮುಂದುವರೆದಿದ್ದು, ಇಂದು ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ ಸಿಬ್ಬಂದಿಯೋರ್ವರಿಗೆ ಗಾಯವಾಗಿದೆ.
ಮೂಲಗಳ ಪ್ರಕಾರ ರಾಜಧಾನಿ ಶ್ರೀನಗರದ ನಾಟಿಪೋರಾದ ಪಿಡಿಪಿ ಮುಖಂಡ ಫರ್ವೇಜ್ ಭಟ್ ಅವರ ನಿವಾಸದ ಎದುರು ಭದ್ರತೆಗಾಗಿ ನಿಯೋಜನೆಯಾಗಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಪೊಲೀಸ್ ಕಾನ್ ಸ್ಟೇಬಲ್ ಮನ್ಸೂರ್ ಅಹ್ಮದ್ ಎಂಬಾತನಿಗೆ ಗುಂಡೇಟು ತಗುಲಿದ್ದು, ಗಾಯಾಳು ಮನ್ಸೂರ್ ಅಹ್ಮದ್ ಭಟ್ ಅವರ ವೈಯುಕ್ತಿಕ ಭದ್ರತಾ ಸಿಬ್ಬಂದಿಯಾಗಿದ್ದರು ಎನ್ನಲಾಗಿದೆ.
ಸದ್ಯ ಗಾಯಾಳು ಪೇದೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಗುಂಡೇಟಿನಿಂದಾಗಿ ಅವರ ಮೂಳೆ ಮತ್ತು ಜಾಯಿಂಟ್ ಗೆ ಗಂಭೀರ ಗಾಯವಾಗಿದೆ.
PublicNext
14/12/2020 01:20 pm