ಬಿಡದಿ: ಟೊಯೊಟಾ ಕಿರ್ಲೋಸ್ಕರ್ ಕಾರ್ಖಾನೆ ಆಡಳಿತ ಮಂಡಳಿಯು ಮತ್ತೆ 20 ಕಾರ್ಮಿಕರನ್ನು ಸೇವೆಯಿಂದ ಅಮಾನತು ಮಾಡಿದೆ.
ಇದರಿಂದಾಗಿ ಅಮಾನತುಗೊಂಡವರ ಸಂಖ್ಯೆ 60ಕ್ಕೆ ಏರಿಕೆ ಆಗಿದೆ.
ಅಮಾನತು ಶಿಕ್ಷೆ ಕುರಿತು ಟಿಕೆಎಂ ಕಾರ್ಮಿಕ ಸಂಘ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
‘ಕಂಪನಿಯು ತನಗೆ ಸಂಬಂಧ ಇಲ್ಲದ ಹೊರಗಿನ ವಿಷಯದ ಆರೋಪದ ಮೇಲೆ ಕಾರ್ಮಿಕರನ್ನು ಅಮಾನತು ಮಾಡುವ ಮೂಲಕ ತನ್ನ ಅಸಹಾಯಕತೆಯನ್ನು ಹೊರಹಾಕಿದೆ.
ಇದರ ವಿರುದ್ಧ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಸಂಘದ ಕಾರ್ಯದರ್ಶಿ ಬಸವರಾಜ ಹವಾಲ್ದಾರ್ ತಿಳಿಸಿದ್ದಾರೆ.
ಕಾರ್ಖಾನೆ ಮುಂಭಾಗ ನೌಕರರ ಪ್ರತಿಭಟನೆಯು 27ನೇ ದಿನವಾದ ಶನಿವಾರವೂ ಮುಂದುವರಿದಿತ್ತು.
PublicNext
05/12/2020 11:17 am