ಬೆಂಗಳೂರು: ರಾಜ್ಯ ಸರ್ಕಾರ ರೈತರಿಗೆ ಉಚಿತವಾಗಿಯೇ ಹಗಲು ಕೂಡ ವಿದ್ಯುತ್ ನೀಡಲು ಮುಂದಾಗಿದ್ದು, ಸೋಲಾರ್ ಫೀಡರ್ಸ್ ಮೂಲಕವೇ ಕೃಷಿ ಪಂಪ್ಸೆಟ್ ಮೂಲಕವೇ ವಿದ್ಯುತ್ ನೀಡೋಕೆ ಪ್ಲಾನ್ ಮಾಡಿದೆ.
ರೈತರಿಗೆ ಮೊದಲ ಹಂತದಲ್ಲಿಯೇ 2.5 ಲಕ್ಷ ಪಂಪ್ಸೆಟ್ಗಳಿಗೆ ತ್ರಿಫೇಸ್ ವಿದ್ಯುತ್ ನೀಡುವ ಕೆಲಸವನ್ನ ಬೆಸ್ಕಾಂ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮಾಡುತ್ತಿದೆ.
ಇದರಿಂದ ಸರ್ಕಾರಕ್ಕೂ ಸಬ್ಸಿಡಿ ಭಾರ ಕಡಿಮೆ ಆಗಲಿದ್ದು, ರೈತರಿಗೆ ಹಗಲು ಹೊತ್ತು ವಿದ್ಯುತ್ ಪೂರೈಕೆ ಮಾಡೋ ಈ ಯೋಜನೆಗೆ ಮುಂದಿನ ತಿಂಗಳು ಚಾಲನೆ ನೀಡೋ ಸಾಧ್ಯತೆ ಇದೆ.
PublicNext
27/05/2022 04:04 pm