ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಟ್ಟ ಮೊದಲ ಸಮುದ್ರ ವಿಮಾನದಲ್ಲಿ ಮೋದಿ ಪಯಣ

ಅಹ್ಮದಾಬಾದ್: ಗುಜರಾತ್ ನಲ್ಲಿ ಆರಂಭವಾದ ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಇದೇ ವೇಳೆ ಸೀ ಪ್ಲೇನ್ ನಲ್ಲಿ ಹಾರಾಟ ನಡೆಸುವ ಮೂಲಕ ದೇಶದ ಮೊದಲ ಸೀ ಪ್ಲೇನ್ ನಲ್ಲಿ ಹಾರಾಟ ನಡೆಸಿದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಿದ್ದಾರೆ.

ಗುಜರಾತಿನ ಸಬರ್‌ಮತಿ ನದಿ ತೀರದಿಂದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸೀಪ್ಲೇನ್‌ ಇದಾಗಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ146ನೇ ಜನ್ಮ ದಿನದ ನಿಮಿತ್ತ ಈ ಸೇವೆಯನ್ನು ಆರಂಭಿಸಲಾಗಿದೆ.

ಇದು ದೇಶದ ಮೊಟ್ಟ ಮೊದಲ ಸೀಪ್ಲೇನ್‌ ವಿಮಾನ ವ್ಯವಸ್ಥೆಯಾಗಿದೆ.

ಸೀಪ್ಲೇನ್‌ ವಿಮಾನ ಅಹಮದಾಬಾದ್‌ನ ನದಿ ತೀರದಿಂದ 10.15 ನಿಮಿಷಕ್ಕೆ ಹಾರಾಟ ಕೈಗೊಳ್ಳಲಿದ್ದು, 10.45ಕ್ಕೆ ಕೆವಾಡಿಯಾ ತಲುಪಲಿದೆ. ಅಂದರೆ ಕೇವಲ 30 ನಿಮಿಷದಲ್ಲಿ ಕೆವಾಡಿಯಾ ತಲುಪಲಿದೆ. ಕೆವಾಡಿಯಾದ ಸರ್ದಾರ್‌ ಸರೋವರ ಅಣೆಕಟ್ಟಿನ ಹಿನ್ನೀರಿನಲ್ಲಿ ವಿಮಾನ ಇಳಿಯಲಿದೆ.

Edited By : Nagaraj Tulugeri
PublicNext

PublicNext

31/10/2020 03:42 pm

Cinque Terre

61.13 K

Cinque Terre

8