ಬ್ರಾಟಿಸ್ಲಾವಾ- 30 ವರ್ಷಗಳ ನಿರಂತರ ಶ್ರಮದ ದ್ಯೋತಕವಾಗಿ ಈಗ ಓಡಬಲ್ಲ, ಹಾರಬಲ್ಲ "ಹಾರುವ ಕಾರು" ತಯಾರಾಗಿದೆ. ಈಗಾಗಲೇ ಪರೀಕ್ಷಾರ್ಥವಾಗಿ ಹಾರಿಯೂ ಆಗಿದೆ. ರಸ್ತೆ ಮೇಲೆ ಶರವೇಗದಲ್ಲಿ ಓಡಿಯೂ ಆಗಿದೆ.
ಅಂದ್ ಹಾಗೆ ಈ ಕಾರನ್ನು ತಯಾರಿಸಿದ್ದು ಯುರೋಪಿನ ಸ್ಲೋವಾಕಿಯಾದ ದೇಶದ ಕ್ಲೈನ್ ವಿಷನ್ ಎಂಬ ಕಂಪನಿ. ಮೊಟ್ಟ ಮೊದಲು ಹಾರುವ ಕಾರನ್ನು ವಿನ್ಯಾಸಗೊಳಿಸಿದ ಅಗ್ಗಳಿಕೆ ಈ ಕಂಪನಿಗೆ ಸೇರಿದೆ. ಸದ್ಯದ ಪೀಳಿಗೆ ಫ್ಲೈಯಿಂಗ್ ಕಾರನ್ನು ಪರೀಕ್ಷಾರ್ಥವಾಗಿ ಚಾಲನೆ ಮಾಡಿದ ಕಂಪನಿ ಭರಪೂರ ಯಶಸ್ಸು ಕಂಡಿತು. ಈ ಹೊಸ ವಿಸ್ಮಯದ ವಿಡಿಯೋ ಈಗಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ಏರ್ ಕಾರ್ 1,100 ಕೆಜಿ ತೂಕವಿದೆ. ತನ್ನೊಂದಿಗೆ 200 ಕೆಜಿ ತೂಕ ಹೊರಬಲ್ಲದು. ಕೇವಲ 3ನಿಮಿಷಗಳಲ್ಲಿ ಈ ಕಾರು ಗಗನಕ್ಕೆ ಜಿಗಿಯಲಿದೆ.
PublicNext
30/10/2020 02:54 pm