ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮತ್ತು ರಾಷ್ಟ್ರಪತಿಗಾಗಿ ಮತ್ತೊಂದು ಬೋಯಿಂಗ್ ವಿಮಾನ

ನವದೆಹಲಿ- ವಿವಿಐಪಿಗಳ ಪ್ರವಾಸಕ್ಕೆಂದೇ ವಿಶೇಷವಾಗಿ ವಿನ್ಯಾಸ ಮಾಡಲಾದ ಮತ್ತೊಂದು ಬೋಯಿಂಗ್ 777 ವಿಮಾನ ಭಾರತಕ್ಕೆ ಬಂದಿಳಿದಿದೆ‌. ಈ ವಿಮಾನಗಳನ್ನು ಈಗ ಭಾರತದ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿ ಬಳಸಬಹುದಾಗಿದೆ.

ಭಾರತ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಣ ಅಂತರವನ್ನು ಈ ವಿಮಾನ ವಿರಾಮವಿಲ್ಲದೇ ಸಂಚರಿಸಬಲ್ಲದು. ವಿವಿಐಪಿಗಳ ಬಳಕೆಗೆಂದೇ ಮೊದಲ ಬೋಯಿಂಗ್ ವಿಮಾನ ಅಕ್ಟೋಬರ್ 1ರಂದು ಭಾರತಕ್ಕೆ ಬಂದು ಲ್ಯಾಂಡ್ ಆಗಿತ್ತು.

ಈಗ ಈ ಎರಡು ಬೋಯಿಂಗ್ ವಿಮಾನಗಳು ಹಾರಾಟಕ್ಕೆ ಸನ್ನದ್ಧವಾಗಿವೆ. ಅಮೆರಿಕ ಅಧ್ಯಕ್ಷರು ಬಳಸುವ ಎಲ್ಲ ರೀತಿಯ ಸುರಕ್ಷಾ ಕ್ರಮಗಳನ್ನು ಈ ವಿಮಾನ ಹೊಂದಿದೆ. ಈ ವಿಮಾನಗಳಿಗೆ ಏರ್ ಇಂಡಿಯಾ ಒನ್ ಎಂದು ಕರೆಯಲಾಗುತ್ತದೆ.

Edited By : Nagaraj Tulugeri
PublicNext

PublicNext

26/10/2020 08:03 am

Cinque Terre

118.87 K

Cinque Terre

26

ಸಂಬಂಧಿತ ಸುದ್ದಿ