ಕೆಲವು ವಾಟ್ಸ್ಆ್ಯಪ್ ಗ್ರುಪ್ ಗಳು ನಿಮಗೆ ಕಿರಿಕಿರಿ ಅನಿಸುತ್ತಲೇ ಇರುತ್ತವೆ. ಅಲ್ಲಿಂದ ಹೊರಬಂದರೂ ಮತ್ತೆ ಸೇರಿಸಿಕೊಳ್ತಾರೆ. ಹೀಗಾಗಿ ಅಂತಹ ಅನಗತ್ಯ ತೊಂದರೆಯಿಂದ ಹೊರಬರಲು ವಾಟ್ಸ್ಆ್ಯಪ್ ನಿಮಗೊಂದು ಹೊಸ ಫೀಚರ್ ಕೊಟ್ಟಿದೆ. ಅದಕ್ಕಾಗಿ ನೀವು ಮಾಡಬೇಕಾದ್ದು ಇಷ್ಟೇ.
ಕಿರಿಕಿರಿ ಎನಿಸುವ ಗ್ರುಪ್ ಗಳನ್ನು ಶಾಶ್ವತವಾಗಿ ಮ್ಯೂಟ್ ಮಾಡಲು
-ನೀವು ಮ್ಯೂಟ್ ಮಾಡಲು ಬಯಸುವ ಇಚ್ಛಿಸುವ ಗ್ರುಪ್ ಮೇಲೆ ಟ್ಯಾಪ್ ಮಾಡಿ
ಗುಂಪಿನ ಹೆಸರಿನ ಮೇಲೆ ಟಚ್ ಮಾಡಿದಾಗ ಗುಂಪು ಮಾಹಿತಿಯ ಅಡಿಯಲ್ಲಿ ಮ್ಯೂಟ್ ಆಯ್ಕೆಗಳನ್ನು ಕಾಣಬಹುದಾಗಿದೆ
ಮ್ಯೂಟ್ ಆಯ್ಕೆಯ ಮೇಲೆ ಟಚ್ ಮಾಡಿದಾಗ ಅಲ್ಲಿ ಮೂರು ಆಯ್ಕೆಗಳು ದೊರೆಯಲಿವೆ
ಅಲ್ಲಿ ಶಾಶ್ವತ ಮ್ಯೂಟ್ ಆಯ್ಕೆಯನ್ನು ಒತ್ತಿದಾಗ ಬೇಡವಾದ ಗ್ರುಪ್ ಮ್ಯೂಟ್ ಆಗಲಿದೆ. ಈ ಮೂಲಕ ನೀವು ಆ ಗುಂಪಿನ ಕಿರಿಕಿರಿಯಿಂದ ಮುಕ್ತರಾಗಬಹುದು.
PublicNext
23/10/2020 04:19 pm