ಬಿಹಾರ್: ತಾಯಿ ಪ್ರೀತಿಗೆ ಸಾಟಿನೇ ಇಲ್ಲ. ಅದು ಮನುಷ್ಯರಾದರೂ ಸರಿಯೇ. ಪ್ರಾಣಿಗಳಾದರೂ ಅಷ್ಟೆ. ಅದಕ್ಕೆ ಇಲ್ಲೊಂದು ಹೃದಯ ಸ್ಪರ್ಶಿ ಸಾಕ್ಷಿವೊಂದಿದೆ.
ತಾಯಿ ಕೋತಿ ಮತ್ತು ಮರಿ ಕೋತಿ ಮರದಿಂದ ಕೆಳಗೆ ಬಿದ್ದಿವೆ. ತಾಯಿ ಕೋತಿ ತಲೆಗೆ ಪೆಟ್ಟು ಬಿದ್ದಿದೆ. ಮರಿ ಕೋತಿಗೆ ಗಾಯ ಆಗಿದೆ.ಅದಕ್ಕೇನೆ ಕೋತಿ ಚಿಕಿತ್ಸೆ ಪಡೆಯುಲು ಆಸ್ಪತ್ರೆಗೂ ಬಂದಿದೆ.
ಆಸ್ಪತ್ರೆ ಬಳಿಗೆ ಬಂದ ಕೋತಿ ಮತ್ತು ಮರಿಯನ್ನ ಕಂಡ ಜನ ಅದನ್ನ ಓಡಿಸೋಕೆ ಮುಂದಾಗಿದ್ದಾರೆ. ಆದರೆ, ಗಾಯಗೊಂಡ ಕೋತಿ ಮತ್ತು ಮರಿಯನ್ನ ಕಂಡು ಚಿಕಿತ್ಸೆ ಕೊಟ್ಟಿದ್ದಾರೆ. ಆಂಜನೇಯನೇ ಈ ರೂಪದಲ್ಲಿ ಬಂದಿದ್ದಾನೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯ ಎಸ್.ಎಂ.ಅಹ್ಮದ್ ಚಿಕಿತ್ಸೆ ಕೊಟ್ಟಿದ್ದಾರೆ. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
PublicNext
09/06/2022 10:19 pm