ತುಮಕೂರು: ಈ ಹಿಂದೆ ಹಲವು ಬಾರಿ ರಥೋತ್ಸವದ ಸಂದರ್ಭದಲ್ಲಿ, ಕೊರೊನಾ ರೋಗ ಓಡಿಸಪ್ಪ. ಪೊಲೀಸರಿಗೆ ಔರಾದ್ಕಾರ್ ವರದಿ ಜಾರಿಗೊಳಿಸಿ, ಸಂಬಳ ಜಾಸ್ತಿ ಮಾಡಪ್ಪ ಸೇರಿದಂತೆ ವಿವಿಧ ಬಾಳೆಹಣ್ಣಿನ ಹರಕೆಯ ಪೋಟೋಗಳು ವೈರಲ್ ಆಗಿದ್ದವು. ಈಗ ಮತ್ತೊಂದು ಇದೇ ಮಾದರಿ ಪೋಟೋ ವೈರಲ್ ಆಗಿದೆ.
'ದೇವ್ರೇ ನನ್ನ ಹುಡುಗಿ ಜೊತೆಗೆ ಮದುವೆಯಾಗಲಿ ಪ್ಲೀಸ್' ಎಂಬುದಾಗಿ ಎಂಬುದಾಗಿ ಪ್ರೇಮಿಯೊಬ್ಬ ಬಾಳೆಹಣ್ಣಿನ ಮೇಲೆ ಬರೆದು ಹರಕೆ ಈಡೇರಿಸುವಂತೆ ತೂರಿರೋ ಪೋಟೋ ವೈರಲ್ ಆಗಿದೆ. ತುಮಕೂರಿನ ತಿಪಟೂರಿನಲ್ಲಿ ನಡೆದಂತ ಜಾತ್ರೆಯೊಂದರಲ್ಲಿ, ಹೀಗೆ ಬಾಳೆಹಣ್ಣಿನ ಮೇಲೆ ಬರೆದು, ಪ್ರೇಮಿಯೊಬ್ಬ ಕೋರಿಕೊಂಡಿರೋದಾಗಿ ತಿಳಿದು ಬಂದಿದೆ. ತನ್ನ ಪ್ರೇಮವನ್ನು ಬಾಳೆ ಹಣ್ಣಿನ ಮೇಲೆ ಬರೆದಿರುವಂತ ಯುವಕನೊಬ್ಬ, ರಥದ ಮೇಲೆ ತೂರಿದ್ದಾನೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತ ಪೋಟೋದಲ್ಲಿ ನಮ್ಮುಡುಗಿ ಜೊತೆ ಮದುವೆ ಆಗಲಿ ಪ್ಲೀಸ್.. 'ಪಿ ಐ ಐ ಲವ್ ಯು' ಎಂಬುದಾಗಿ ಬರೆದು, ರಥದ ಮೇಲೆ ಎಸೆದಿದ್ದಾನೆ. ತನ್ನ ಬೇಡಿಕೆ ಈಡೇರಿಸುವಂತೆ ದೇವರಲ್ಲಿ ಕೋರಿಕೊಂಡಿದ್ದಾನೆ. ಈ ಪೋಟೋ ಈಗ ವೈರಲ್ ಆಗಿದೆ.
PublicNext
23/05/2022 06:14 pm