ಶಿವಮೊಗ್ಗ: ಬಾಕ್ಸ್ ಡ್ರೈನೇಜ್ ಒಳಭಾಗದಲ್ಲಿ ಸಿಲುಕಿದ್ದ ಗೋವನ್ನು ಮುಸ್ಲಿಂ ಯುವಕರು ರಕ್ಷಿಸಿದ್ದಾರೆ. ಶಿವಮೊಗ್ಗದ ಎನ್.ಟಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ಕಾಂಕ್ರೀಟ್ ಬಾಕ್ಸ್ ಚರಂಡಿಯ ಒಳಭಾಗದಲ್ಲಿ ಗೋವು ಸಿಲುಕಿತ್ತು. ಇದನ್ನು ಗಮನಿಸಿದ ಸ್ಥಳೀಯ ಮುಸ್ಲಿಂ ಯುವಕರು, ಫೋಕ್ ಲೈನ್ ತರಿಸಿ, ಗೋವನ್ನು ಮೇಲೆತ್ತಿದ್ದಾರೆ. ಜೀಲನ್ ರಾಜಾ ಹಾಗೂ ಸ್ನೇಹಿತರು ಮಾಡಿದ ಈ ಕಾರ್ಯಕ್ಕೆ ಶಿವಮೊಗ್ಗದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
19/04/2022 01:00 pm