ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಕೈ ಕೊಡ್ತು ಕುದುರೇನೆ ಸಾಥಿ ಆಯಿತು !

ಮಹಾರಾಷ್ಟ್ರ: ಕೋವಿಡ್ ಲಾಕ್ ಡೌನ್ ಇಡೀ ಜಗತ್ತಿನ ಲೈಫ್ ಸ್ಟೈಲ್ ಅನ್ನೇ ಬದಲಿಸಿದೆ. ಇದೇ ಲಾಕ್ ಡೌನ್ ವೇಳೆನೆ ಮಹಾಷ್ಟ್ರದ ವ್ಯಕ್ತಿಯೊಬ್ಬರು ಬೈಕ್ ಸೈಡ್‌ಗೆ ಇಟ್ಟು ಕುದುರೆ ಖರೀದಿಸಿದರು. ಈಗಲೂ ಅದೇ ಕುದರೇನೆ ಇವರಿಗೆ ಸಾಥಿ. ಬನ್ನಿ, ನೋಡೋಣ.

ಕುದುರೆ ಮೇಲೇನೆ ಸಾಗುತ್ತಿರೋ ಈ ವ್ಯಕ್ತಿಯ ಹೆಸರು ಶೇಖ್ ಯುಸೂಫ್. ಜೌರಂಗಾಬಾದ್ ನಿವಾಸಿ. ತಮ್ಮ ಪ್ರೀತಿಯ ಕುದುರೆಗೆ ಜಿಗರ್ ಅಂತಲೇ ಹೆಸರಿಟ್ಟಿದ್ದಾರೆ. ದಿನವೂ ಇದೇ ಕುದುರೆ ಮೇಲೆನೆ ದೂರ ದೂರಕ್ಕೂ ಸಾಗುತ್ತಾರೆ.

ಅಂದ್ಹಾಗೆ ಲಾಕ್ ಡೌನ್ ಟೈಮ್‌ ನಲ್ಲಿ 40 ಸಾವಿರ ಕೊಟ್ಟು ಈ ಕುದುರೆ ಖರೀದಿಸಿದ್ದಾರೆ. ಕಾರಣ ಬೈಕ್ ಕೆಟ್ಟು ಹೋಗಿದೆ. ಸರಿ ಮಾಡಿಸಿ ಓಡಿಸೋಣ ಅನ್ನೋ ಹೊತ್ತಿಗೆ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಈ ಕಾರಣಕ್ಕೇನೆ ಕುದುರೆಯನ್ನೇ ಬಳಸುತ್ತಿದ್ದಾರೆ. ಹೀಗೆ ಕುದುರೆ ಮೇಲೆ ಸಾಗೋ ಶೇಖ್‌ ಅವರ ಈ ವೀಡಿಯೋ ವೈರಲ್ ಆಗುತ್ತಿದೆ.

Edited By :
PublicNext

PublicNext

15/03/2022 05:40 pm

Cinque Terre

58.48 K

Cinque Terre

1