ಹೈದ್ರಾಬಾದ್:ಟಾಲಿವುಡ್‌ನ ಯುವ ನಟಿ ಶ್ರೇಯಾ ಮುರಳೀಧರ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಚಿಕ್ಕ ವಯಸ್ಸಿನ ಈ ಯುವ ನಟಿ ಸಾವಿಗೆ ಇಡೀ ಟಾಲಿವುಡ್ ಕಂಬನಿ ಮಿಡಿದಿದೆ.
ಶ್ರೇಯಾ ಮುರಳೀಧರ್ ವಯಸ್ಸು ಇನ್ನೂ ಚಿಕ್ಕದು. ಹೆಚ್ಚು ಕಡಿಮೆ 27 ವರ್ಷ ಆಗಿರಬಹದು. ಯೂಟ್ಯೂಬರ್ ಆಗಿ, ಕಿರುತೆರೆಯಲ್ಲಿ ಹೆಸರು ಮಾಡಿ, ಅಂದು ಕೊಂಡದ್ದನ್ನ ರೀಚ್ ಕೂಡ ಆದ ಭರವಸೆ ನಟಿ ಈ ಶ್ರೇಯಾ ಮುರಳೀಧರ್. 'ಪೆಲ್ಲಿ ಚೂಪುಲು' ರಿಯಾಲಿಟಿ ಶೋ ದಲ್ಲೂ ಶ್ರೇಯಾ ಭಾಗಿಯಾಗಿ ಗಮನ ಸೆಳೆದಿದ್ದರು.
ಆದರೆ ಈಗ ನೋಡಿದ್ರೆ ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಗಳ ಸಾವಿಗೆ ಪೋಷಕರು ನೊಂದು ಬೆಂದು ಹೋಗಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಸಿನಿಮಾದವರು ಶ್ರೇಯಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
PublicNext
08/12/2021 01:01 pm