ಕೇರಳ ಮೂಲದ ಶ್ರುತಿ ಸಿತಾರಾ ಅವರಿಗೆ ಈ ವರ್ಷದ ಮಿಸ್ ಟ್ರಾನ್ಸ್ ಗ್ಲೋಬಲ್ ಪ್ರಶಸ್ತಿ ಲಭಿಸಿದೆ. ಸರ್ಕಾರಿ ನೌಕರಿ ಪಡೆದ ನಾಲ್ವರು ತೃತೀಯಲಿಂಗಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಸಿತಾರಾ ಈ ಸುದ್ದಿಯನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
ಮಿಸ್ ಟ್ರಾನ್ಸ್ ಗ್ಲೋಬಲ್ 2021, ಈ ಸ್ಮೈಲ್ ನನಗೆ ತುಂಬಾ ಅರ್ಥಪೂರ್ಣವಾಗಿದೆ. ನನ್ನ ದೇಶಕ್ಕಾಗಿ ನನ್ನ ಸಮುದಾಯಕ್ಕಾಗಿ ಟ್ರಾನ್ಸ್ ಗ್ಲೋಬಲ್ ಸಂಸ್ಥೆಗಾಗಿ ತುಳಿತಕ್ಕೊಳಗಾದ ಕಷ್ಟದ ಅಂಚಿನಲ್ಲಿರುವ ಎಲ್ಲರಿಗೂ ಇಲ್ಲಿ ನಾನು, ಶ್ರುತಿ ಸಿತಾರಾ, ಮಿಸ್ ಟ್ರಾನ್ಸ್ ಗ್ಲೋಬಲ್ 2021 ಶೀರ್ಷಿಕೆ ವಿಜೇತೆ ಈ ಯಶಸ್ವಿ ಪ್ರಯಾಣದ ಹಿಂದೆ ಇರುವ ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಬರೆದಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ಲಂಡನ್ ನಲ್ಲಿ ನಡೆಯಬೇಕಿದ್ದ ಭೌತಿಕ ಕಾರ್ಯಕ್ರಮವನ್ನು ಈ ವರ್ಷ ರದ್ದುಗೊಳಿಸಿದ್ದರಿಂದ ಆನ್ ಲೈನ್ ಈವೆಂಟ್ ನಲ್ಲಿ ಟೈಟಲ್ ಗಳನ್ನು ನೀಡಲಾಗಿದೆ. ಮಾಡೆಲ್-ಕಲಾವಿದರನ್ನು ಕೇರಳದ ಉನ್ನತ ಶಿಕ್ಷಣ ಸಚಿವೆ ಡಾ ಆರ್ ಬಿಂದು ಅವರು ಅಭಿನಂದಿಸಿದ್ದಾರೆ.
PublicNext
05/12/2021 07:47 pm