ಗದಗ: ಭಕ್ತ ಸಮೂಹದಲ್ಲಿ ತ್ರಿವಿಧ ದಾಸೋಹದ ದೀಪವನ್ನ ಅಜರಾಮರಗೊಳಿಸಿ, ಅನ್ನದಾನೇಶ್ವರ ಮಠದ ನಂದಾ ದೀಪ ಶಿವನಲ್ಲಿ ಲೀನವಾಗಿದೆ. ಲಿಂಗ ಸ್ವರೂಪ ಹೊಂದಿದ ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಗೌರವ ಸಲ್ಲಿಸಿದರು.
ಸಾಗರೋಪಾದಿಯಲ್ಲಿ ಕಂಡುಬಂದ ಭಕ್ತಸಾಗರ. ಪ್ರತಿಯೊಬ್ಬರಿಗೂ ಶ್ರೀಗಳನ್ನು ಕಣ್ತುಂಬಿಕೊಳ್ಳಬೇಕೆಂಬ ಹಂಬಲ. ಜೈಕಾರದ ಮಧ್ಯೆ ಕಾಯಕ ಯೋಗಿಯ ನಡೆದ ಅಂತಿಮ ದರ್ಶನ. ಹೌದು, ಗದಗ ಜಿಲ್ಲೆ ರೋಣ ತಾಲೂಕಿನ ಹಾಲಕೆರೆ ಗ್ರಾಮದಲ್ಲಿಂದು ಶೋಕ ಮಡುಗಟ್ಟಿತ್ತು. ತ್ರಿವಿಧ ದಾಸೋಹದ ಯಜಮಾನನ್ನು ಕಳೆದುಕೊಂಡ ಭಾವದಲ್ಲಿ ಭಕ್ತಸಾಗರ ಮುಳುಗಿತ್ತು. ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀಗಳಾಗಿದ್ದ, ಡಾ. ಸಂಗನ ಬಸವ ಅಭಿನವ ಅನ್ನದಾನೇಶ್ವರ ಶ್ರೀಗಳು ದೇಹತ್ಯಾಗ ಮಾಡಿರೋ ವಿಚಾರ ಭಕ್ತ ಸಮೂಹಕ್ಕೆ ಬರಸಿಡಿಲ ಆಘಾತ ಉಂಟು ಮಾಡಿತ್ತು. ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತ ಸಮೂಹ ಶ್ರೀಗಳ ದರ್ಶನ ಪಡೀತು. ಹಾಲಿ,ಮಾಜಿ ಸಚಿವರು. ಶಾಸಕರು ಶ್ರೀಗಳ ದರ್ಶನ ಪಡೆದು ಗೌರವ ಸಲ್ಲಿಸಿದ್ರು.
ಇನ್ನೂ ಹಾಲಕೆರೆ ಅನ್ನದಾನೇಶ್ವರ ನೂತನ ಪೀಠಾಧಿಪತಿಗಳಾದ ಮುಪಿನ ಬಸವಲಿಂಗ ಶ್ರೀಗಳು ಅಭಿನವ ಅನ್ನದಾನೇಶ್ವರ ಶ್ರೀಗಳ ಪಾರ್ಥಿವ ಶರೀರಕಂಡು ಕಣ್ಣೀರು ಹಾಕಿದರು. ಆ ವೇಳೆ ಹುಬ್ಬಳ್ಳಿ ಮೂರು ಸಾವಿರ ಮಠದ ಗುರು ಸಿದ್ದ ರಾಜಯೋಗೆಂದ್ರ ಶ್ರೀಗಳ ಸಮಾಧಾನ ಮಾಡಿದರು. ಹಾಲಕೆರೆಯ ಮಠದಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದ ಗುರುಸಿದ್ದ ರಾಜಯೋಗೇಂದ್ರ ಶ್ರೀಗಳು ಡಾ.ಸಂಗನಬಸವ ಶ್ರೀಗಳ ಇಲ್ಲವಾಗಿರೋದು ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಲ್ಲಿಸಿರುವ ಸೇವೆ ಅನನ್ಯವಾದದ್ದು..ನಮ್ಮ ನಾಡಿನ ಮದ್ವ ಶಿವಯೋಗಿ ಮಂದಿರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಗುರುಪರಂಪರೆಯ ಗಟ್ಟಿ ಕೊಂಡಿಯೊಂದು ಕಳಚಿದೆ.. ಹಾಲಕೆರೆಯ ಭಾಗ್ಯ ವಿಧಾತ, ಲಿಂಗದಲ್ಲಿ ಲೀನರಾಗಿದ್ದಾರೆ.. ಆದರೆ ಅನ್ನ, ಶಿಕ್ಷಣ ದಾಸೋಹದಂತ ಉದಾತ್ತ ಚಿಂತನೆಗಳನ್ನ ನಾಡಿನ ಜನರ ಮನದಲ್ಲಿ ಬಿತ್ತಿ ಅಮರರಾಗಿದ್ದಾರೆ..
PublicNext
24/11/2021 03:17 pm