ಗಿನ್ನಿಸ್ ವಿಶ್ವ ದಾಖಲೆ ಬರೆಯೋದು ಅಷ್ಟು ಸುಲಭವಲ್ಲ.ಆದರೆ ಇಲ್ಲೊಬ್ಬ ಹುಡುಗ ಮಾಸ್ಕ್ ಧರಿಸೋದರಲ್ಲಿಯೇ ಮಾಸ್ಟರ್ ಆಗಿದ್ದಾನೆ. ಕೇವಲ 7.35 ಸೆಕೆಂಡ್ ಗಳಲ್ಲಿ 10 ಸರ್ಜಿಕಲ್ ಮಾಸ್ಕ್ ಧರಿಸಿ ವಿಶ್ವ ದಾಖಲೆ ಮಾಡಿದ್ದಾರೆ. ಅದೇ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ.
ಪಟ ಪಟನೆ ಮಾಸ್ಕ್ ಧರಿಸೋ ಈ ಹುಡುಗನ ಹೆಸರು ಜಾರ್ಜ್ ಪೀಲ್. 7.35 ಸೆಕೆಂಡ್ ಗಳಲ್ಲಿ 10 ಸರ್ಜಿಕಲ್ ಮಾಸ್ಕ್ ಧರಿಸುತ್ತಾನೆ. ಅದಕ್ಕೇನೆ ಈತ ಈಗ ಫೇಮಸ್ ಕೂಡ ಆಗಿದ್ದಾನೆ. ಮಾಸ್ಕ್ ಧರಿಸಿಯೆ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದಾನೆ ಅಂತಲೂ ಹೇಳಲಾಗುತ್ತಿದೆ.ವೀಡಿಯೋ ಅಂತೂ ಸೋಶಿಯಲ್ ಮೀಡಿಯಾದಲ್ಲಿ ಬೇಜಾನ್ ಸೌಂಡ್ ಮಾಡ್ತಿದೆ.
PublicNext
20/11/2021 06:39 pm