ಚಿಕ್ಕಮಗಳೂರು: ಪೆಟ್ರೋಲ್-ಡೀಸೆಲ್ ಬೆಲೆ ಈಗಾಗಲೇ ಗಗನಕ್ಕೇರಿದೆ. ಜನಸಾಮಾನ್ಯರಿಗೆ ಈಗ ಪೆಟ್ರೋಲ್ ಬಲು ದುಬಾರಿ. ಈ ಹಿನ್ನೆಲೆ ಮದುವೆಗೆ ಬಂದ ಸ್ನೇಹಿತರು ನೂತನ ದಂಪತಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟಿದ್ದಾರೆ. ಈ ಸಂಗತಿ ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ.
ಮುಹೂರ್ತ ಮುಗಿದ ಬಳಿಕ ವೇದಿಕೆ ಮೇಲೆ ರಿಸೆಪ್ಷನ್‍ಗೆ ನಿಂತಿದ್ದ ದಂಪತಿಗಳು ಪೆಟ್ರೋಲ್ ಬಾಟಲಿ ನೋಡಿ ಶಾಕ್ ಆಗಿದ್ದಾರೆ. ಮದುವೆಗೆ ಬಂದಿದ್ದ ಇತರ ಆಮಂತ್ರಿತರು ಕೂಡ ಉಡುಗೊರೆ ನೋಡಿ ನಸುನಕ್ಕಿದ್ದಾರೆ. ಮೂಡಿಗೆರೆ ಪಟ್ಟಣದ ಬಂಟರ ಭವನದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ಮರ್ಕಲ್ ಹಾಗೂ ವೈಷ್ಣವಿ ಮದುವೆ ಸಮಾರಂಭ ಇತ್ತು. ಮದುವೆ ಸಮಾರಂಭಕ್ಕೆ ಬಂದಿದ್ದ ಸಚಿನ್ ಮತ್ತು ಅವರ ಸ್ನೇಹಿತರು ನವದಂಪತಿಗಳಿಗೆ ಒಂದು ಲೀಟರ್ ನ ಮೂರು ಪೆಟ್ರೋಲ್ ಬಾಟಲಿಗಳನ್ನು ನೀಡಿ ಶುಭ ಕೋರಿದ್ದಾರೆ.
PublicNext
16/10/2021 07:53 am