ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಹುಮಾನದ ಹಣವನ್ನು ಮೃತನ ಕುಟುಂಬಕ್ಕೆ ನೀಡಿ ಮಾನವೀಯತೆ ಮೆರೆದ ಪೊಲೀಸರು

ಮೈಸೂರು: ಪೊಲೀಸರನ್ನು ಹೊಗಳುವುದಕ್ಕಿಂತಲೂ ಬೈಯುವವರೇ ಹೆಚ್ಚು ಸದ್ಯ ಮೈಸೂರಿನ ಪೊಲೀಸರು ಮಾಡಿರುವ ಕಾರ್ಯ ನೋಡಿದ್ರೆ ನೀವು ಕೂಡ ಬೇಷ್ ಎನ್ನುತ್ತಿರಾ. ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಆ.23 ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ ನಲ್ಲಿ ನಡೆದಿದ್ದ ಶೂಟೌಟ್ ಮತ್ತು ದರೋಡೆ ಪ್ರಕರಣ ನಡೆದಿತ್ತು. ಗುಂಡಿನ ದಾಳಿಗೆ ದಡದಹಳ್ಳಿ ಯುವಕ ಚಂದ್ರು ಮೃತರಾಗಿದ್ದರು. ಈ ಪ್ರಕರಣವನ್ನು ಬೇಧಿಸಿದ ಮೈಸೂರು ಪೊಲೀಸರಿಗೆ

ರಾಜ್ಯ ಸರ್ಕಾರ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು.

ಸದ್ಯ ಅವರಿಗೆ ಬಂದ ಬಹುಮಾನದ ಹಣವನ್ನು ಕಮಿಷನರ್ ಮತ್ತು ಅವರ ತಂಡ ಚಂದ್ರು ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು ನೀಡುವ ಮೂಲಕ ಪೊಲೀಸರಿಗೂ ಮಾನವೀಯತೆ ಇದೆ ಎಂದು ನಿರೂಪಿಸಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಗದು ಹಣವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ವೇಳೆ ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾಪ್ರಸನ್ನ ಉಪಸ್ಥಿತಿಯಲ್ಲಿದ್ದರು.

Edited By : Nirmala Aralikatti
PublicNext

PublicNext

23/09/2021 05:49 pm

Cinque Terre

53.28 K

Cinque Terre

5