ದಾವಣಗೆರೆ: ಗಡಿ ಭದ್ರತಾ ಪಡೆಯಲ್ಲಿ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿ ಯೋಧನಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಹೊನ್ನಾಳಿ ತಾಲೂಕಿನ ನೇರಲಗುಂಡಿ ಗ್ರಾಮದ ಕೃಷ್ಣನಾಯ್ಕ, ಶ್ರೀನಿವಾಸ್ ನಾಯ್ಕ ನಿವೃತ್ತರಾಗಿ ಗ್ರಾಮಕ್ಕೆ ಯೋಧರು ಆಗಮಿಸಿದರು. ಈ ವೇಳೆ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು. ಗ್ರಾಮಸ್ಥರು ಯೋಧರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಗ್ರಾಮದಾದ್ಯಂತ ತೆರದ ವಾಹನದಲ್ಲಿ ಯೋಧರ ಮೆರವಣಿಗೆ ಮಾಡಿ ಗ್ರಾಮಸ್ಥರು ಸಂಭ್ರಮಿಸಿದರು. ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆತ್ಮೀಯವಾಗಿ ಬರಮಾಡಿಕೊಂಡರು.
ಕಳೆದ 22 ವರ್ಷಗಳಿಂದ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರಿಗೆ ಗೌರವ ಸಲ್ಲಿಸುವ ಮೆರವಣಿಗೆಯಲ್ಲಿ ಎಂ. ಪಿ. ರೇಣುಕಾಚಾರ್ಯ ಭಾಗಿಯಾದರು. ಭಾರತಾಂಬೆಯ ಪರ ಘೋಷಣೆ ಕೂಗಿ ಗ್ರಾಮಸ್ಥರು ಸಂಭ್ರಮಿಸಿದರು.
PublicNext
10/09/2021 04:12 pm