ಹೊಸದಿಲ್ಲಿ : ಕೃಷಿ ಕಾನೂನು ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ರೈತರನ್ನು ಪ್ರಚೋದಿಸುತ್ತಿರುವುದು, ತನ್ನ ಟ್ವೀಟ್ ಮೂಲಕ ಪಾಪ್ ಗಾಯಕಿ ರಾಬಿನ್ ರಿಹಾನಾ ಪ್ರತಿಭಟನಕಾರರನ್ನು ಉತ್ತೇಜಿಸುತ್ತಿರುವುದನ್ನು ವಿಶ್ವವೇ ನೋಡುತ್ತಿದೆ.
ನಮ್ಮ ದೇಶದ ಆಂತರಿಕ ವಿಷಯದಲ್ಲಿ ರೆಹಾನಾ, ಮಾಜಿ ನೀಲಿಚಿತ್ರಗಳ ತಾರೆ ಮಿಯಾ ಖಲೀಫಾ ಮೂಗು ತೂರಿಸುತ್ತಿರುವುದಕ್ಕೆ ಭಾರತೀಯ ನಾಗರಿಕರು ಸಿಟ್ಟಾಗಿದ್ದಾರೆ. ಇವರ ಹಸ್ತಕ್ಷೇಪಕ್ಕೆ ಕ್ರಿಕೆಟ್ ಹಾಗೂ ಚಿತ್ರರಂಗದ ಅನೇಕ ದಿಗ್ಗಜರು ತೀವ್ರ ಅಸಮಾಧಾನ ಸಹ ವ್ಯಕ್ತಪಡಿಸಿದ್ದಾರೆ.
ಆದರೆ ನಮ್ಮ ದೇಶದ ಮಹಾನ್ ಸಂಸ್ಕೃತಿ ನೋಡಿ. ನಮ್ಮ ದೇಶದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ಇದೇ ಪಾಪ್ ಗಾಯಕಿ ರಿಹಾನಾ ತಾಯ್ನಾಡಿನ ಬಾರ್ಬಡೋಸ್‌ಗೆ 1,00,000 ಕ್ಕೂ ಹೆಚ್ಚಿನ ಕೊರೋನಾ ಲಸಿಕೆಗಳನ್ನು ಕಳುಹಿಸಿ ಮಾನವೀಯತೆ ಮೆರೆದಿದೆ.
ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ‘ಲಸಿಕೆ ಮೈತ್ರಿ’ ಉಪಕ್ರಮದ ಅಡಿಯಲ್ಲಿ ರಿಹಾನಾ ದೇಶದ ಬಾರ್ಬಡೋಸ್‌ಗೆ 100,000 ಡೋಸ್ ಲಸಿಕೆಯನ್ನು ಕಳುಹಿಸಿದೆ. ಬಾರ್ಬಡೋಸ್ ಮೇಡ್ ಇನ್ ಇಂಡಿಯಾ ಲಸಿಕೆಗಳನ್ನು ಸ್ವೀಕರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಟ್ವಿಟ್ ಮಾಡಿದ್ದಾರೆ.
ಭಾರತವು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೋವಿಡ್ -19 ಲಸಿಕೆಯ ಎರಡು ಸರಕುಗಳು ಬಾರ್ಬಡೋಸ್ ತೀರಕ್ಕೆ ತಲುಪುತ್ತಿದ್ದಂತೆ,ಅಲ್ಲಿಯ ಪ್ರಧಾನಿ ಮಿಯಾ ಮೊಟ್ಲಿ ಅವರು ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಾರ್ಬಡೋಸ್ ಪಿಎಂ ಮಿಯಾ ಮೊಟ್ಲಿ ಅವರು ಮತ್ತು ಅವರ ಸಹೋದ್ಯೋಗಿಗಳು ಸ್ವೀಕರಿಸಿದ ಲಸಿಕೆ ರವಾನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ‘ತ್ವರಿತ, ನಿರ್ಣಾಯಕ ಮತ್ತು ಭವ್ಯವಾದ’ ಕ್ರಮಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳು ಎಂದೂ ಅವರು ಟ್ವೀಟ್ ಮಾಡಿದ್ದಾರೆ.
PublicNext
10/02/2021 01:58 pm