ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಲಕನ ಸಮಯ ಪ್ರಜ್ಞೆ, 60 ಜನ ಸೇಫ್

ರಾಯಚೂರು: ಒಬ್ಬ ಚಾಲಕ ವಾಹನದಲ್ಲಿರುವ ಎಲ್ಲ ಜೀವಗಳ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಅವರು ಒಂದೊಮ್ಮೆ ಕೊಂಚ ಯಾಮಾರಿದರೂ ಪ್ರಯಾಣಿಕರ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಹಾಗಾಗಿ ಚಾಲಕರ ಜವಾಬ್ದಾರಿ ತುಸು ಹೆಚ್ಚು. ಸದ್ಯ ರಾಯಚೂರಿನಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ 60 ಜನರ ಪ್ರಾಣ ಉಳಿದಿದೆ.

ಹೌದು ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆಗಿ ಸರ್ಕಾರಿ ಬಸ್ ರಸ್ತೆ ಬಿಟ್ಟರೂ ಯಾವುದೇ ಅನಾಹುತ ಸಂಭವಿಸದೆ, ಚಾಲಕನ ಸಮಯ ಪ್ರಜ್ಞೆಯಿಂದಾಗಿ 60 ಜನರು ಬದುಕುಳಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಬುದ್ದಿನ್ನಿ ಗ್ರಾಮದ ಬಳಿ ಬುಧವಾರ ನಡೆದಿದೆ.

ಬಾಗಲಕೊಟೆಯಿಂದ ರಾಯಚೂರಿಗೆ ಬರುವಾಗ ಬಸ್ ವೇಗದಲ್ಲಿದ್ದರೂ ಬ್ರೇಕ್ ಫೇಲ್ ಆಗಿದ್ದನ್ನು ಅರಿತ ಚಾಲಕ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ. ರಸ್ತೆ ಪಕ್ಕದ ಇಳಿಜಾರಿನಲ್ಲಿ ಬಸ್ ನಿಲುಗಡೆ ಆಗಿದೆ. ಯಾವುದೇ ಅವಘಡವಾಗಿದೆ.

Edited By : Nirmala Aralikatti
PublicNext

PublicNext

03/02/2021 07:04 pm

Cinque Terre

113.21 K

Cinque Terre

22