ಅಂಬಿಕಾಪುರ: ಅಪ್ಪ ಅಂದ್ರೆ ಮಗಳು ಅಪಾರ ಪ್ರೀತಿ. ಮಗಳು ಅಂದ್ರೆ ಅಪ್ಪನಿಗೂ ಅದೇ ಪ್ರೀತಿ.ಇಂತಹ ಅಪ್ಪ ತನ್ನ ಮೃತ ಮಗಳ ದೇಹವನ್ನ ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ. ಈ ದೃಶದ ವೀಡಿಯೋ ಈಗ ವೈರಲ್ ಆಗಿದೆ. ಇದನ್ನ ಕಂಡ ಆರೋಗ್ಯ ಸಚಿವರು ಕೂಡ ತನಿಖೆಗೂ ಆದೇಶಿಸಿದ್ದಾರೆ.
ಛತ್ತೀಸಗಢದ ಸರ್ಗುಜಾ ಮೂಲದ ವ್ಯಕ್ತಿ ಈಶ್ವರ್ ದಾಸ ತನ್ನ ಏಳು ವರ್ಷದ ಮಗಳನ್ನ ಸುರೇಖಾಳ ಹೊತ್ತು ಸಾಗಿದ್ದಾರೆ. ಈ ಒಂದು ದೃಶ್ಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಕೂಡ ಆಗುತ್ತಿದೆ.
ಆರೋಗ್ಯ ಮಂತ್ರಿ ಟಿ.ಎಸ್.ಸಿಂಗ್ ಡಿಯೋ ಈ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದಾರೆ. ಲಖನ್‌ಪುರ್ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಅನಾರೋಗ್ಯದಿಂದಲೇ ಬಾಲಕಿ ಮೃತಪಟ್ಟಿದ್ದಾಳೆ. ಮೃತದೇಹ ರವಾನಿಸೋ ವಾಹನ ಬರೋ ಮುಂಚೇನೆ ತಂದೆ ಬಾಲಕಿಯ ಶವವನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಗ್ಯ ಕೇಂದ್ರದ ಅಧಿಕಾರಿಗಳೂ ತಿಳಿಸಿದ್ದಾರೆ.
ಲಖನ್‌ಪುರ್ ಗ್ರಾಮದಲ್ಲಿರು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದೆ ಮಗಳನ್ನ ಕರೆತಂದಿದ್ದರು. ಬಾಲಕಿಯ ಆಮ್ಲಜನಕ ಮಟ್ಟ 60ಕ್ಕೂ ತುಂಬಾ ಕಡಿಮೆ ಇತ್ತು. ತೀವ್ರ ಜ್ವರದಿಂದಲೂ ಬಾಲಕಿ ಬಳಲುತ್ತಿದ್ದಳು. ಚಿಕಿತ್ಸೆ ನೀಡಿದರೂ ಅದು ಫಲಕಾರಿ ಆಗದೇ ಬಾಲಕಿ ಶುಕ್ರವಾರ 7.30ಕ್ಕೆ ಮೃತಪಟ್ಟಿದ್ದಾಳೆ ಎಂದು ವೈದ್ಯಕೀಯ ಸಹಾಯ ಡಾ.ವಿನೋದ್ ಭಾರ್ಗವ್ ತಿಳಿಸಿದ್ದಾರೆ.
ಮೃತ ಮಗಳನ್ನ ಹೊತ್ತು ಕೊಂಡು ತನ್ನೂರು ಅಮ್ದಾಲ್ ಗ್ರಾಮಕ್ಕೆ ನಡೆದು ಕೊಂಡೇ ತಂದೆ ಹೊರಟು ಹೋಗಿದ್ದಾರೆ. ಹೆಚ್ಚು ಕಡಿಮೆ ಅದು 10 ಕಿಲೋ ಮೀಟರ್ ದೂರವೇ ಆಗಿದೆ. ಈ ಒಂದು ವೀಡಿಯೋವನ್ನ ಅದ್ಯಾರ್ ತೆಗೆದರೋ ಏನೋ. ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
PublicNext
26/03/2022 05:47 pm