ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್ ಪಿಬಿ ಸರಳತೆಗೆ ಸಾಕ್ಷಿ ಶಬರಿಮಲೆ ಯಾತ್ರೆ : ವಿಡಿಯೋ ಹಂಚಿಕೊಂಡ ಸಂಸದ

ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಶಬರಿಮಲೆ ಎಂದರೆ ವಿಶಿಷ್ಟವಾದ ನಂಟು.

ಗಾನಗಾರುಡಿಗನಿಗೆ ಅಯ್ಯಪ್ಪ ಸ್ವಾಮಿ ಎಂದರೆ ಅಪಾರ ಭಕ್ತಿ ಹಾಗಾಗಿಯೇ ಆಗಾಗ ಶಬರಿ ಮಲೆಗೆ ಹೋಗಿ ಸ್ವಾಮಿ ಅಯ್ಯಪ್ಪನ ದರ್ಶನವನ್ನು ಮಾಡಿಕೊಂಡು ಬರುತ್ತಿದ್ದರು.

ಆದರೆ ವಿಧಿಯಾಟ ನಿನ್ನೇ ಸಂಗೀತದ ಮೇರು ಪರ್ವತ, ಗಾನ ಗಾರುಡಿಗ, ಸುಮಧುರ ಹಾಡುಗಳ ಸರದಾರ, ನಟ, ಸಂಗೀತ ನಿರ್ದೇಶಕ ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ಇಹಲೋಕ ತೇಜಿಸಿದರು.

ಅನಾರೋಗ್ಯದಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವುದು ಎಲ್ಲರಿಗೂ ತಿಳಿದಿದೆ. ದೈಹಿಕವಾಗಿ ಅವರು ನಮ್ಮನಗಲಿದ್ದಾರೆ ಆದರೆ ಅವರ ಸರಳ ಸಜ್ಜಿನಿಕೆಯ ಅನೇಕ ದಾರ್ಶನಿಕತೆಯನ್ನು ಇಲ್ಲಿಯೇ ಬಿಟ್ಟು ಹೋಗಿದ್ದಾರೆ.

ಆ ಕುರಿತಂತೆ ಸಂಸದ ತ್ಯೇಜಸ್ವಿ ಸೂರ್ಯ ಎಸ್ ಬಿಪಿಯವರ ಸರಳತೆಗೆ ಸಾಕ್ಷಿಯಾದ ವಿಡಿಯೋ ತುಣುಕೊಂದನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಎಸ್ ಪಿಬಿ ಶಬರಿಮಲೆ ಯಾತ್ರಗೆ ತೆರಳಿದ ಸಂದರ್ಭದಲ್ಲಿ ಡೋಲಿಯಲ್ಲಿ ಪ್ರಯಾಣಿಸುವ ಮೊದಲು ಆ ಡೋಲಿಯನ್ನು ಹೊರುವ ಸ್ವಾಮಿಗಳ ಕಾಲುಗಳಿಗೆ ವಿನಮ್ರ ಮನೋಭಾವದಿಂದ ಎರಗಿದ್ದಾರೆ.

ಅಲ್ಲಿ ಎಸ್ ಪಿಬಿ ತಾವೊಬ್ಬ ಸೆಲೆರ್ಬಿಟಿ ಎನ್ನುದನ್ನು ಮರೆತು ಅತ್ಯಂತ ವಿನಮ್ರತೆಯಿಂದ ನಡೆದುಕೊಂಡಿದ್ದಾರೆ ಇದು ಅವರ ಸರಳತೆಗೆ ಹಿಡಿದ ಕೈಗನ್ನಡಿ.

Edited By : Nagesh Gaonkar
PublicNext

PublicNext

26/09/2020 05:13 pm

Cinque Terre

99.12 K

Cinque Terre

0

ಸಂಬಂಧಿತ ಸುದ್ದಿ