ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರೀತಿಸಿ ಮದುವೆಯಾದ ತಮಿಳುನಾಡು ಸಚಿವರ ಪುತ್ರಿಗೆ ಕರ್ನಾಟಕ ಪೊಲೀಸರಿಂದ ರಕ್ಷಣೆ

ಬೆಂಗಳೂರು: ಪ್ರೀತಿಸಿ ಮದುವೆಯಾಗಿರುವ ತಮಿಳುನಾಡು ಸಚಿವ ಶೇಖರ್ ಬಾಬು ಪುತ್ರಿ ಜಯ ಕಲ್ಯಾಣಿ, ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ, ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.

2021ರ ಸೆಪ್ಟೆಂಬರ್‌ನಲ್ಲಿ ಚೈನ್ನೈನಿಂದ ನಾಪತ್ತೆಯಾಗಿದ್ದ ತಮಿಳುನಾಡಿನ ಮುಜುರಾಯಿ ಖಾತೆ ಸಚಿವ ಶೇಖರ್ ಬಾಬು ಅವರ ಪುತ್ರಿ ಜಯ ಕಲ್ಯಾಣಿ, ಬಳ್ಳಾರಿಯ ಹಗರಿಬೊಮ್ಮನಹಳ್ಳಿಯ ಹಾಲಸ್ವಾಮಿ ಮಠದಲ್ಲಿ, ಸತೀಶ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮಗಳ ಮದುವೆಗೆ ತಂದೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು.

ಈ ಹಿನ್ನಲೆಯಲ್ಲಿ, ಇಂದು ಜಯಮಹಲ್‌ನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ತಮಿಳುನಾಡು ಸಚಿವ ಶೇಖರ್ ಬಾಬು ಪುತ್ರಿ ಜಯಕಲ್ಯಾಣಿ ಭೇಟಿಯಾದರು. ತಮ್ಮ ತಂದೆಯಿಂದ ನಮಗೆ ಜೀವ ಭಯವಿದೆ. ನಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಜಯಕಲ್ಯಾಣಿ ಮನವಿ ಸ್ವೀಕರಿಸಿದ ಗೃಹ ಸಚಿವರು, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕರೆ ಮಾಡಿ, ಸೂಕ್ತ ರಕ್ಷಣೆಯ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.

Edited By : Nagaraj Tulugeri
PublicNext

PublicNext

09/03/2022 10:15 pm

Cinque Terre

31.37 K

Cinque Terre

0

ಸಂಬಂಧಿತ ಸುದ್ದಿ