ನವದೆಹಲಿ:ಇಂದಿನ ದಿನಗಳಲ್ಲಿ ಅಂಕವೇ ಮುಖ್ಯ.ವಿದ್ಯಾರ್ಥಿಗಳು ಟಾಪರ್ ಆಗಲು ಹೆಣಗಾಡುತ್ತಿದ್ದಾರೆ.ಜ್ಞಾನಕ್ಕಿಂತಲೂ ಅಂಕ ಗಳಿಸುವುದೇ ಇವರ ಮುಖ್ಯ ಗುರಿ ಆಗಿ ಬಿಟ್ಟಿದೆ. ಆದರೆ, ಇದರಿಂದ ಹೊರಗೆ ಬನ್ನಿ. ಅಂಕ ಮುಖ್ಯವಲ್ಲ. ಜ್ಞಾನ ಮುಖ್ಯ ಅಂತ ಹೇಳು ಐಎಎಸ್ ಅಧಿಕಾರಿಯೊಬ್ಬರು ತಮ್ಮ SSLC ಅಂಕಪಟ್ಟಿಯನ್ನ ಹಂಚಿಕೊಂಡಿದ್ದಾರೆ.
ಹೌದು. ಛತೀಸ್‌ಗಢ್ ಕೇಡರ್‌ನ 2009 ರ ಬ್ಯಾಚಿನ ಐಎಎಸ್ ಅಧಿಕಾರಿ ಅವನೀಶ್ ಶರಣ್‌ಅವ್ರೇ ಈಗ ತಮ್ಮ SSLC ಅಂಕಪಟ್ಟಿಯನ್ನ ಹಂಚಿಕೊಂಡಿದ್ದಾರೆ. ಈ ಹಿಂದೆ ಕಡಿಮೆ ಮಾರ್ಕ್ಸ್ ಪಡೆದು ಐಎಎಸ್ ಅಧಿಕಾರಿಯಾದ ಸಾಧಕರ ಅಂಕಪಟ್ಟಿಯನ್ನ ಇವರು ಹಂಚಿಕೊಂಡು ಮೋಟಿವೇಟ್ ಮಾಡ್ತಾ ಇದ್ದರು. ಈಗ ತಮ್ಮದೇ ಅಂಕ ಪಟ್ಟಿ ಶೇರ್ ಮಾಡಿದ್ದಾರೆ.
ಅಂದ್ಹಾಗೆ, ಅವನೀಶ್ ಶರಣ್, SSLCಯಲ್ಲಿ ಜೆಸ್ಟ್ ಪಾಸ್ ಆಗಿದ್ದಾರೆ. ಗಣಿತಕ್ಕೆ 31 ಅಂಕ ಪಡೆದಿದ್ದರೆ. ಒಟ್ಟು 700 ಅಂಕಗಳಿಗೆ ಕೇವಲ 314 ಅಂಕ ಪಡೆದು ಪಾಸ್ ಆಗಿದ್ದಾರೆ. ಶೇಕಡಾವಾರ ಇವರ ಫಲಿತಾಂಶ ಕೇವಲ 44.85 ಆಗಿದೆ.
PublicNext
11/07/2022 08:53 am