ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಂದೇ ಕಾಲಿನಲ್ಲಿ ಶಾಲೆಗೆ ಹೊರಟ ಬಾಲೆ : ಮನಕಲಕುವ ವಿಡಿಯೋ ವೈರಲ್

ಪಾಟ್ನಾ : ಆನ್ ಲೈನ್ ಜಗತ್ತಿನಲ್ಲಿ ಮಕ್ಕಳಿಗೆ ಕೇಳಿದ್ದೆಲ್ಲವನ್ನು ಕೊಟ್ಟು ಶಾಲೆಗೆ ಹೋಗು ಎಂದರು ಕುಂಟು ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುವ ಮಕ್ಕಳ ಮಧ್ಯೆ ಇಲ್ಲೊಬ್ಬ ಬಾಲೆ ಒಂದೇ ಕಾಲಿನಲ್ಲಿ ಕುಂಟುತ್ತಾ ಶಾಲೆಯತ್ತ ಮುಖ ಮಾಡಿದ ವಿಡಿಯೋವೊಂದು ಎಲ್ಲರ ಮನಮುಟ್ಟುವಂತಿದೆ.

ಹೌದು ಬಿಹಾರದ ಜಮುಯಿಯ ಸೀಮಾ ಎಂಬ 10 ವರ್ಷದ ಬಾಲಕಿ ತಾನು ಓದಬೇಕು ಎನ್ನುವ ಹಂಬಲದಲ್ಲಿ ಶಾಲೆಗೆ ಹೊರಟ ಪರಿ, ಶಿಕ್ಷಣದ ಉತ್ಸಾಹ ನೆಟ್ಟಿಗರ ಹೃದಯ ಗೆದ್ದಿದೆ. ಸೀಮಾ ತನ್ನ ಮನೆಯಿಂದ ಒಂದು ಕಿ.ಮೀ ದೂರದಲ್ಲಿರುವ ಹಳ್ಳಿಯ ಶಾಲೆಗೆ ಒಂದೇ ಕಾಲಿನಲ್ಲಿ ಕುಂಟುತ್ತಾ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಸದ್ಯ ಈ ಬಾಲೆಯ ಕಥೆ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಬಾಲಿವುಡ್ ನಟ ಸೋನು ಸೂದ್ ಅವರು ಈ ವಿಡಿಯೋ ಗಮನಿಸಿದ್ದು, ರೀಟ್ವೀಟ್ ಮಾಡಿದ್ದಾರೆ. ಅಲ್ಲದೆ, ಬಾಲಕಿ ಸೀಮಾಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸೋನು ಸೂದ್, ಸೀಮಾ ಶೀಘ್ರದಲ್ಲೇ ತನ್ನ ಎರಡೂ ಕಾಲುಗಳೊಂದಿಗೆ ಶಾಲೆಗೆ ಹೋಗುತ್ತಾಳೆ ಎಂದು ಭರವಸೆ ನೀಡಿದ್ದಾರೆ. ಆಕೆಗೆ ಕೃತಕ ಕಾಲು ಜೋಡಿಸಲು ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ.

ತಾನು ದೊಡ್ಡವಳಾದ ಬಳಿಕ ಶಿಕ್ಷಕಿಯಾಗಬೇಕೆಂಬ ಕನಸು ಕಂಡಿರುವ ಸೀಮಾ, ಎರಡು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ತನ್ನ ಒಂದು ಕಾಲು ಕಳೆದುಕೊಂಡಿದ್ದಾಳೆ. ಆದರೆ, ಧೃತಿಗೆಡದ ಬಾಲಕಿ ತನ್ನ ಓದಿಗಾಗಿ ಹವಣಿಸುತ್ತಿರುವ ರೀತಿಯನ್ನು ಎಲ್ಲರು ಮೆಚ್ಚಲೇಬೇಕು.

Edited By : Nirmala Aralikatti
PublicNext

PublicNext

26/05/2022 03:38 pm

Cinque Terre

73.09 K

Cinque Terre

16