ಕೊಪ್ಪಳ: ಹಿಜಾಬ್-ಕೇಸರಿ ಶಾಲು. ಇವೆಲ್ಲ ಯಾರಿಗೂ ಬೇಕಿಲ್ಲ. ಬೇಕಾದವರು ತೆರೆ ಮರೆಯಲ್ಲಿಯೇ ಇದ್ದಾರೆ. ಅದನ್ನ ಅರಿಯದ ವಿದ್ಯಾರ್ಥಿನಿಯರು ಇಂದು ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದಾರೆ. ಅದರಂತೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯೊಬ್ಬಳು ನಾವೆಲ್ಲ ಒಂದೇ. ನಾವು ಭಾರತೀಯರು ಅನ್ನೋ ಹಾಗೆ ಭಾರತದ ನಕ್ಷೆ ಬಿಡಿಸಿ ಗಮನ ಸೆಳೆದಿದ್ದಾಳೆ.
ಹೌದು. ಈ ಘಟನೆ ನಡೆದಿರೋದು ಕೊಪ್ಪಳದಲ್ಲಿಯೇ. ಇಲ್ಲಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿ ಹಿಜಾಬ್ ಧರಿಸಿಯೇ ಶಾಲೆಗೆ ಬಂದಿದ್ದಾಳೆ. ಹಾಗೆ ಬಂದ ಈ ಪುಟ್ಟ ವಿದ್ಯಾರ್ಥಿನಿಯ ಭಾರತದ ನಕ್ಷೆ ಬಿಡಿಸಿದ್ದಾಳೆ. ಅದುವೇ ಈಗ ನಾವೆಲ್ಲ ಇಂಡಿಯೆನ್ಸ್ ಅನ್ನೊದನ್ನ ಸಾರಿ ಸಾರಿ ಹೇಳಿದಂತಿದೆ.
PublicNext
14/02/2022 04:51 pm