ಪಟ್ನಾ: ಮಕ್ಕಳು ತರಗತಿಗೆ ಬಂದಿಲ್ಲ ಎಂದು ಬಿಹಾರ ರಾಜ್ಯದಲ್ಲಿ ಹಿಂದಿ ಪ್ರಾಧ್ಯಾಪಕರೊಬ್ಬರು ತಮ್ಮ 32 ತಿಂಗಳ 24 ಲಕ್ಷ ವೇತನವನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಿದ್ದಾರೆ. ಭ್ರಷ್ಟಾಚಾರ ಮಾಡುವವರ ಮಧ್ಯೆ ಜೀವನ ನಡೆಸುತ್ತಿರುವ ಈ ಪ್ರಾಧ್ಯಾಪಕ ಲಲನ್ ಕುಮಾರ್ ಪ್ರಾಮಾಣಿಕತೆಯ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು ಮುಜಾಫರ್ ಪುರ್ ನಗರದ ನಿತೀಶ್ವರ್ ಕಾಲೇಜಿನಲ್ಲಿ ಲಲನ್ ಕುಮಾರ್ ಹಿಂದಿ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ‘ನಮ್ಮ ಕಾಲೇಜಿನ ಹಿಂದಿ ವಿಭಾಗದಲ್ಲಿ 131 ವಿದ್ಯಾರ್ಥಿಗಳು ಇದ್ದರೂ ಅವರಲ್ಲಿ ಯಾರೊಬ್ಬರು ತರಗತಿಗೆ ಬರುತ್ತಿಲ್ಲ. ಹಾಗಾಗಿ ನಾನು ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸಂಬಳ ಪಡೆಯುವುದು ನೈತಿಕತೆಯಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 24 ಲಕ್ಷ ರೂ. ವೇತನವನ್ನು ನಿತೀಶ್ವರ್ ಮಹಾವಿದ್ಯಾಲಯದ ಕುಲಪತಿಗಳಿಗೆ ವಾಪಸ್ ನೀಡಿದ್ದೇನೆ ಎಂದು ಲಲನ್ ಕುಮಾರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ, 2019 ಸೆಪ್ಟೆಂಬರ್ ತಿಂಗಳಿಂದ 2022ರ ಮೇ ವರೆಗೆ (2 ವರ್ಷ 9 ತಿಂಗಳು) ಪಡೆದ 23,82,238 ರೂ. ವೇತನದ ಚೆಕ್ ಅನ್ನು ಕುಲಪತಿಗಳಿಗೆ ನೀಡಿದ್ದೇನೆ ಎಂದು ಲಲನ್ ಕುಮಾರ್ ಹೇಳಿದ್ದಾರೆ.
PublicNext
07/07/2022 04:32 pm