ಬೆಳಗಾವಿ : ತಮ್ಮ ಮನೆಯಲ್ಲಿ ಸಾಕಿದ ಪ್ರೀತಿಯ ಸಾಕು ಪ್ರಾಣಿಗಳ ಬರ್ತ್‌ಡೇ ಮಾಡೋದು ಈಗಿನ ದಿನ ಮಾನಗಳಲ್ಲಿ ಎಲ್ಲ ಸಾಮಾನ್ಯ. ಆದರೆ ಇಲ್ಲೊಂದು ಕುಟುಂಬ ಅವರೆಲ್ಲರಿಗಿಂತ ಕೊಂಚ ವಿಭಿನ್ನವಾಗಿ ಮನೆಯಲ್ಲಿ ಸಾಕಿದ್ದ ಹುಂಜಗಳ ಬರ್ತ್ ಡೇಯನ್ನು ಸಂಭ್ರಮದಿಂದ ಆಚರಿಸಿದೆ..!
ಬೆಳಗಾವಿಯ ಮಾಳಿ ಗಲ್ಲಿಯ ಮೇಘನಾ ಲಂಗರಖಂಡೆ ಕುಟುಂಬಸ್ಥರು ಈ ರೀತಿ ಹುಂಜಗಳ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಮನೆಯಲ್ಲಿ ಸಾಕಿದ ಹುಂಜಗಳಿಗೆ ಶೇರು ಹಾಗೂ ವೀರು ಅಂತಾ ಹೆಸರಿಟ್ಟಿದ್ದು, ಇವುಗಳ 5ನೇ ವರ್ಷದ ಜನ್ಮದಿನವನ್ನು ಕೇಕ್ ಕತ್ತರಿಸಿ, ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ಮೇಲೆ ಕೂಡ ಹುಂಜಗಳ ಚಿತ್ರವನ್ನೇ ನಮೂದಿಸಿದ್ದನ್ನು ನೋಡಬಹುದು. ಹುಂಜಗಳ ಹುಟ್ಟುಹಬ್ಬ ಆಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
PublicNext
21/12/2020 03:50 pm