ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂದೆಯ ಸಾವಿಗೆ ನೊಂದು ಊರಿಗೆ ಬಂದಿದ್ದ ಯೋಧ ಸಾವು

ಹಾವೇರಿ: ರಜೆ ಮೇಲೆ ಬಂದಿದ್ದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ತಾವರಗಿ ಗ್ರಾಮದಲ್ಲಿ ನಡೆದಿದೆ.

39 ವರ್ಷ ವಯಸ್ಸಿನ ಭರಮಗೌಡ ಹೊಸಮನಿ ಮೃತ ಯೋಧ. ಇವರು ಕಳೆದ 18 ವರ್ಷಗಳಿಂದ ಬಿಎಸ್‍ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಂದೆ ನಿಧನರಾಗಿದ್ದರಿಂದ 15 ದಿನಗಳ ಹಿಂದೆಯಷ್ಟೇ ರಜೆ ಪಡೆದು ಊರಿಗೆ ಬಂದಿದ್ದರು. ಸದ್ಯ ಇವರು ಮೇಘಾಲಯದ ಬಿಎಸ್‍ಎಫ್ ಬಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನಿನ್ನೆ ಸಂಜೆ ಭರಮಗೌಡ ಹೊಸಮನಿಯವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಹಿರೇಕೆರೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಯೋಧ ಇನ್ನಿಲ್ಲವಾಗಿದ್ದಾರೆ. ಅಪ್ಪನ ಸಾವಿನ ನಂತರ ಮಗ ಕೂಡ ಇನ್ನಿಲ್ಲವಾಗಿರುವುದು ಕುಟುಂಬಸ್ಥರಿಗೆ ಸೂತಕದ ಸಂಕಟ ಕಾಡುತ್ತಿದೆ.

Edited By : Nagaraj Tulugeri
PublicNext

PublicNext

26/11/2020 11:14 am

Cinque Terre

136.56 K

Cinque Terre

22