ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

75 ವರ್ಷಗಳಿಂದ ಮರದ ಕೆಳಗೆ ಅಜ್ಜನಿಂದ ಮಕ್ಕಳು ಮಾತ್ರವಲ್ಲದೆ ವಯಸ್ಕವರಿಗೂ ಉಚಿತ ಪಾಠ

ಭುವನೇಶ್ವರ್: ಒಡಿಶಾದ ವೃದ್ಧರೊಬ್ಬರು ಕಳೆದ 75 ವರ್ಷಗಳಿಂದ ಯಾವುದೇ ಶುಲ್ಕ ತೆಗೆದುಕೊಳ್ಳದೆ ಮರದ ಕೆಳಗೆ ಮಕ್ಕಳು ಅಷ್ಟೇ ಅಲ್ಲದೆ ವಯಸ್ಕರಿಗೆ ಪಾಠ ಮಾಡುತ್ತಿದ್ದಾರೆ.

ಜಜ್ಪುರ್ ಜಿಲ್ಲೆಯ ಬರ್ತಂಡ ಗ್ರಾಮದ ವೃದ್ಧ ನಂದ ಪ್ರಾಸ್ತಿ ಅವರು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ದೊಡ್ಡವರಿಗೂ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ದೊಡ್ಡವರಿಗೆ ಮಾತ್ರ ರಾತ್ರಿ ಸಮಯದಲ್ಲಿ ಪಾಠಗಳನ್ನು ಹೇಳಿಕೊಡುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿದ ಸರ್ಕಾರ ನೆರವು ನೀಡಲು ಮುಂದಾಗಿತ್ತು. ಆದರೆ ನಂದಾ ಅವರು ಮಾತ್ರ ಸರ್ಕಾರದ ನೆರವನ್ನು ಪಡೆಯಲು ನಿರಾಕರಿಸಿದ್ದಾರೆ. ಅಲ್ಲದೆ ಹಳೆಯ ಮರದ ಕೆಳಗೆಯೇ ಕುಳಿತು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಂದಾ, ನಾನು ಕೃಷಿ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದೆ. ನಮ್ಮ ಹಳ್ಳಿಯನ್ನು ಹಲವಾರು ಮಂದಿ ಅನಕ್ಷರಸ್ಥರು ಇರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಹಳ್ಳಿಯ ಜನ ಹೆಬ್ಬೆಟ್ಟು ಒತ್ತುತ್ತಾರೆಯೇ ಹೊರತು ಯಾರಿಗೂ ತಮ್ಮ ಹೆಸರಿನ ಸಹಿ ಹಾಕಲು ಬರುತ್ತಿರಲಿಲ್ಲ. ಹೀಗಾಗಿ ಒಂದು ದಿನ ಅವರನ್ನೆಲ್ಲ ಕರೆದು ಸಹಿ ಹಾಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟೆ. ಈ ವೇಳೆ ಅನೇಕರು ಆಸಕ್ತಿಯಿಂದ ಬಂದು ಸಹಿ ಹಾಕುವುದನ್ನು ಕಲಿತುಕೊಂಡರು. ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವರು ಭಗವದ್ಗೀತೆಯನ್ನು ಓದಲು ಪ್ರಾರಂಭಿಸಿದರು. ಸದ್ಯ ನನ್ನ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಮೊಮ್ಮಕ್ಕಳಿಗೆ ನಾನು ಪಾಠ ಹೇಳಿಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

28/09/2020 05:40 pm

Cinque Terre

32.12 K

Cinque Terre

2